ವಿಶ್ವ ಛಾಯಾಗ್ರಾಹಕರ ದಿನಾಚರಣೆ ಪ್ರಯುಕ್ತ ಸೇವಾ ಕಾರ್ಯ
ಬದಿಯಡ್ಕ: ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಅಂಗವಾಗಿ ಆ.19ರಂದು ಶುಕ್ರವಾರ ಆಲ್ ಕೇರಳ ಫೋಟೋಗ್ರಾಫರ್‍ಸ್ ಅಸೋಸಿಯೇಶನ್‌ನ ಬದಿಯಡ್ಕ, ಕುಂಬಳೆ, ಉಪ್ಪಳ ಘಟಕಗಳನ್ನೊಳಗೊಂಡ ಕುಂಬಳೆ ವಲಯದ ನೇತೃತ್ವದಲ್ಲಿ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಅನ್ನದಾನ ಮಾಡಲಾಯಿತು.
ವಲಯದ ಪದಾಧಿಕಾರಿಗಳು, ಸದಸ್ಯರು ಆಶ್ರಮವಾಸಿಗಳೊಂದಿಗೆ ಮಧ್ಯಾಹ್ನದ ಭೋಜನ ಸ್ವೀಕರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎಕೆಪಿಎ ಕಾಸರಗೋಡು ಜಿಲ್ಲಾ ಅಧ್ಯಕ್ಷ ಎನ್.ಎ. ಭರತನ್ ಮಾತನಾಡುತ್ತಾ ಛಾಯಾಗ್ರಾಹಕರ ದಿನದಂದು ಸಮಾಜಕ್ಕೆ ಏನಾದರೂ ನೀಡಬೆಕೆನ್ನುವ ಉದ್ದೇಶವನ್ನಿಟ್ಟುಕೊಂಡು ಕುಂಬಳೆ ವಲಯದ ಛಾಯಾಗ್ರಾಹಕರು ಹಮ್ಮಿಕೊಂಡ ಈ ಕಾರ್ಯವು ಶ್ಲಾಘನೀಯ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು.ಎ, ಜಿಲ್ಲಾ ಉಪಾಧ್ಯಕ್ಷ ವಿಜಯನ್ ಉಪ್ಪಳ, ಜಿಲ್ಲಾ ಕೋಶಾಧಿಕಾರಿ ವೇಣು ವಿ.ವಿ.ಕುಂಬಳೆ, ಜಿಲ್ಲಾ ಜೊತೆ ಕಾರ್ಯದರ್ಶಿ ಚಂದ್ರಶೇಖರ, ಕುಂಬಳೆ ವಲಯ ಅಧ್ಯಕ್ಷ ಸುನಿಲ್ ಮಂಜೇಶ್ವರ, ಕೋಶಾಧಿಕಾರಿ ವೇಣುಗೋಪಾಲ ನೀರ್ಚಾಲು, ಕಾರ್ಯದರ್ಶಿ ಸುರೇಶ ಆಚಾರ್ಯ, ಬದಿಯಡ್ಕ ಯೂನಿಟ್ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಆಶ್ರಯ ಆಶ್ರಮದ ಗಣೇಶ ಕೃಷ್ಣ ನೀರ್ಚಾಲು ಶುಭಕೋರಿ ಮಾತನಾಡಿ ಛಾಯಾಗ್ರಾಹಕರಿಗೂ ಆಶ್ರಮಕ್ಕೂ ಅನೇಕವರ್ಷದ ಸಂಪರ್ಕವಿದೆ. ತಮ್ಮ ವೃತ್ತಿಯನ್ನು ಗೌರವಿಸಿಕೊಂಡು ಇಂದು ಅನ್ನದಾನವನ್ನು ಮಾಡಿದ್ದಾರೆ. ಇನ್ನಷ್ಟು ಜನಸೇವೆಯನ್ನು ಮಾಡಿ ಸಮಾಜವು ಗುರುತಿಸುವಂತಹ ಕಾರ್ಯ ನಿರಂತರ ನಡೆಯಲಿ ಎಂದರು. ಇದೇವೇಳೆ ಉಪ್ಪಳದ ಪ್ರಸಿದ್ಧ ಸ್ಟುಡಿಯೋದ ಮಾಲಕ, ಜಿಲ್ಲಾ ಉಪಾಧ್ಯಕ್ಷ ವಿಜಯನ್ ಆಶ್ರಮವಾಸಿಗಳಿಗೆ ಬೆಡ್‌ಶೀಟ್‌ಗಳನ್ನು ನೀಡಿ ಹಿರಿಯರ ಆಶೀರ್ವಾದವನ್ನು ಪಡೆದುಕೊಂಡರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment