ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು, ಉಜಿರೆ ಇಲ್ಲಿ ಜಂತುಹುಳ ನಿವಾರಣಾ ದಿನದ ಪ್ರಯುಕ್ತ ಯುವ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸುನಿಲ್ ಪಿ ಜೆ ಇವರು ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಎನ್ ದಿನೇಶ್ ಚೌಟ ಇವರು ವಹಿಸಿದ್ದರು. ಜೂನಿಯರ್ ರೆಡ್‍ಕ್ರಾಸ್‍ನ ಯೋಜನಾಧಿಕಾರಿ ಡಾ. ಪ್ಲೇವಿಯಾ ಪೌಲ್ ಹಾಗೂ ಸಂಯೋಜಕರಾದ ಕವನಶ್ರೀ ಜೈನ್ ಉಪಸ್ಥಿತರಿದ್ದರು. ಸುನಿಲ್ ಪಿ.ಜೆ ಇವರು ಆರೋಗ್ಯವೇ ಆಸ್ತಿ ಎಂದು ಮಕ್ಕಳಲ್ಲಿ ಅರಿವು ಮೂಡಿಸಿ, ಜಂತುಹುಳ ನಿವಾರಣಾ ದಿನದ ಬಗ್ಗೆ ಮಾಹಿತಿಯನ್ನು ಮಕ್ಕಳಿಗೆ ತಿಳಿಹೇಳಿದರು. ಕಾರ್ಯಕ್ರಮವನ್ನು ರಾಕೇಶ್ ನಾಯಕ್ ಇವರು ನಿರೂಪಿಸಿದರು.
Post a Comment