ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೊಳುವಾರು ಮಹಡಿಯಿಂದ ಬಿದ್ದು 9ನೇ ತರಗತಿ ವಿದ್ಯಾರ್ಥಿ ಬಲಿ

ಬೊಳುವಾರು ಮಹಡಿಯಿಂದ ಬಿದ್ದು 9ನೇ ತರಗತಿ ವಿದ್ಯಾರ್ಥಿ ಬಲಿ

 


ಪುತ್ತೂರು: ನಗರದ ಬೊಳುವಾರು ವಸತಿ ಸಮುಚ್ಚಾಯವೊಂದರ ಬಿ ಬ್ಲಾಕ್ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ವಿದ್ಯಾರ್ಥಿ  ಮೃತಪಟ್ಟ ಘಟನೆಯೊಂದು ನಡೆದಿದೆ.


ಬೊಳುವಾರು ದುರ್ಗಾಪರಮೇಶ್ವರಿ ಮಲರಾಯ ಸಪರಿವಾರ ಕ್ಷೇತ್ರದ ವಿಶ್ವಸ್ಥ ಮಂಡಳಿ ಅಧ್ಯಕ್ಷ, ಸ್ಥಳೀಯ ನಿವಾಸಿ ಮನೋಹರ ರೈ ಅವರ ಪುತ್ರ, ಸುದಾನ ವಸತಿಯುತ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಶಾನ್ ರೈ (15) ಮೃತ ಬಾಲಕ.


ಸುಶಾನ್ ರೈ ಶಾಲೆಯಿಂದ ಮನೆಗೆ ಹೋಗದೆ ಬೊಳುವಾರು ವಸತಿ ಸಮುಚ್ಚಾಯಕ್ಕೆ ತೆರಳಿದ್ದ. ಸಮುಚ್ಚಾಯದ ಕೆಳಗೆ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಆತ ಪತ್ತೆಯಾಗಿದ್ದನು.


 ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.


ಆತನಿಗೆ ತಂದೆ, ತಾಯಿ ಸುಧಾ ಎಂ. ರೈ ಮತ್ತು ಸಹೋದರ ಸೋಹನ್‌ ರೈ.


ಸುಶಾನ್ ರೈ ಶಾಲೆಯಿಂದ ಮನೆಗೆ ಹೋಗದೆ ವಸತಿ ಸಮುಚ್ಚಾಯಕ್ಕೆ ಸಂಜೆ 4.20ಕ್ಕೆ ಬಂದಿರುವುದು ಸಿಸಿಟಿವಿ ಕ್ಯಾಮರ ದಲ್ಲಿ ಸೆರೆಯಾಗಿದೆ. 


ಕೆಲ ನಿಮಿಷದಲ್ಲಿ ಆತ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಆದರೆ, ಆತನ ಶಾಲಾ ಬ್ಯಾಗ್ 5ನೇ ಮಹಡಿಯಲ್ಲಿ ಪತ್ತೆಯಾಗಿದೆ.



0 تعليقات

إرسال تعليق

Post a Comment (0)

أحدث أقدم