ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ. ರಾಷ್ಟ್ರೀಯ ಸೇವಾ ಯೋಜನೆ, ಗೊರೆಟ್ಟಿ ಆಸ್ಪತ್ರೆ, ಕಲ್ಯಾಣಪುರ ಮತ್ತು ಫೆಡರೇಶನ್ ಆಫ್ ಆಬ್ಸಿಟ್ರಿಕ್ ಆ್ಯಂಡ್ ಗೈನಕಲಾಜಿಕಲ್ ಸೊಸೈಟಿ ಆಫ್ ಇಂಡಿಯಾ, ಮಣಿಪಾಲ ಘಟಕಗಳ ಸಹಯೋಗದಲ್ಲಿ “ಧೀರ– ಮಹಿಳಾ ದೌರ್ಜನ್ಯ ತಡೆ ಮಾಹಿತಿ ಕಾರ್ಯಕ್ರಮವನ್ನು ಬುಧವಾರ (ಜು.20) ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ರಾಜಲಕ್ಷ್ಮೀ ಸ್ತ್ರೀ ರೋಗ ತಜ್ಷರು ಮತ್ತು ಧೀರ ತರಬೇತುದಾರರು ಭಾಗಹಿಸಿ ಮಹಿಳಾ ದೌರ್ಜನ್ಯವು ಸರ್ವ ವ್ಯಾಪಕವಾಗಿದ್ದು, ಧೀರ ಯೋಜನೆಯು ಮಹಿಳಾ ದೌರ್ಜನ್ಯದ ವಿರುದ್ಧ ಧೈರ್ಯದಿಂದ ಹೋರಾಡುವುದಾಗಿದೆ, ಈ ಬಗ್ಗೆ ಅರಿವು ಮೂಡಿಸಿಕೊಂಡು ಶೋಷಣೆಯ ಪ್ರಮಾಣವನ್ನು ತಡೆಯಬಹುದಾಗಿದೆ ಅಥವಾ ಕಡಿಮೆ ಮಾಡಬಹುದಾಗಿದೆ. ವಿದ್ಯಾರ್ಥಿಗಳು ಇದರ ಬಗ್ಗೆ ಅರಿವು ಮೂಡಿಸಿಕೊಂಡು ಸಮಾಜದೆಲ್ಲೆಡೆ ಈ ಮಾಹಿತಿಯನ್ನು ಹರಡಬೇಕಾಗಿದೆ” ಎಂದು ತಿಳಿಸಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್. ಮಾತನಾಡಿ “ಮಹಿಳಾ ವಿರುದ್ಧದ ದೌರ್ಜನ್ಯಕ್ಕೆ ಇತ್ತೀಚೆಗೆ ಹೊಸ ಹೊಸ ಸ್ವರೂಪಗಳು ಸೇರಿಕೊಳ್ಳುತ್ತಿದೆ. ಸುಶಿಕ್ಷಿತ ವಲಯಗಳಲ್ಲಿಯೇ ನೀತಿ ನಿಯಮಗಳ ಹೆಸರಿನಲ್ಲಿ ಮಹಿಳಾ ದೌರ್ಜನ್ಯಗಳಾಗುತ್ತಿರುವುದು ಖೇದಕರ ಸಂಗತಿ” ಎಂದು ವಿಷಾದ ವ್ಯಕ್ತಪಡಿಸಿದರು.
ಗೊರೆಟ್ಟಿ ಆಸ್ಪತ್ರೆಯ ಸಮಾಜ ಕಾರ್ಯ ವಿಭಾಗದ ಸಂಯೋಜಕ ರಾಕೇಶ್ ಹಾಗೂ ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಯೋಜನಾಧಿಕಾರಿ ಶ್ರೀಮತಿ ಸುಷ್ಮಾ ಟಿ. ಪ್ರಾಸ್ತವಿಕವಾಗಿ ಮಾತನಾಡಿದರು. ಕು. ಪ್ರಶಾಂತಿ ಸ್ವಾಗಿಸಿದರು. ಕು. ಸಜನಿ ನಿರೂಪಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಕೆ.ಇ. ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment