ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಂಗಾರ ಪದಕ ಸಿಗದಿದ್ದರೂ ಪರವಾಗಿಲ್ಲ, ಬಂಗಾರದ ಮನುಷ್ಯರಾಗಿ: ಪ್ರೊ.ಡಾ ಕೆ.ಪಿ ಪುತ್ತೂರಾಯ

ಬಂಗಾರ ಪದಕ ಸಿಗದಿದ್ದರೂ ಪರವಾಗಿಲ್ಲ, ಬಂಗಾರದ ಮನುಷ್ಯರಾಗಿ: ಪ್ರೊ.ಡಾ ಕೆ.ಪಿ ಪುತ್ತೂರಾಯ



ಮೂಡುಬಿದಿರೆ: ಕಲಿಕೆಯ ಜತೆಗೆ ಆರೋಗ್ಯ, ಭೌತಿಕ, ಸಂಸ್ಕೃತಿ ಹಾಗೂ ವ್ಯಕ್ತಿತ್ವದ ವಿಕಸನ ಉಂಟಾದಾಗ ಮಾತ್ರ ಪರಿಪೂರ್ಣ ಶಿಕ್ಷಣವಾಗುತ್ತದೆ. ಬಂಗಾರದ ಪದಕ ದೊರೆಯದಿದ್ದರೂ ಪರವಾಗಿಲ್ಲ, ಬಂಗಾರದಂತ ಗುಣಗಳನ್ನು ಬೆಳೆಸಿಕೊಳಸಿಕೊಂಡು ಬಂಗಾರದ ಮನುಷ್ಯರಾಗರಬೇಕು ಎಂದು ಖ್ಯಾತ ವಾಗ್ಮಿ ಹಾಗೂ ಅಂಕಣಕಾರ ಡಾ. ಕೆ.ಪಿ ಪುತ್ತೂರಾಯ ಹೇಳಿದರು.


ವಿದ್ಯಾಗಿರಿಯ ನುಡಿಸಿರಿ ಸಭಾಂಗಣದಲ್ಲಿ, ಆಳ್ವಾಸ್ ಪದವಿ ಪೂರ್ವ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣವೆಂದರೆ ಕೇವಲ ಮಾಹಿತಿ ಸಂಗ್ರಹಕ್ಕಾಗಿ ಪದವಿ ಪಡೆಯುವುದು ಮಾತ್ರವಲ್ಲ, ಓರ್ವ ವಿದ್ಯಾರ್ಥಿಯಲ್ಲಿ ಸರ್ವತೋಮುಖ ಬೆಳವಣಿಗೆಯ ಕೌಶಲ್ಯಗಳನ್ನು ಬೆಳೆಸುವುದು. ಪದವಿಯಿಂದ ಉದ್ಯೋಗ ಭದ್ರತೆ ಸಾಧ್ಯ ಇದರ ಜತೆಗೆ ಪರಿಪೂರ್ಣ ಜೀವನವನ್ನು ನಡೆಸುವುದನ್ನೂ ಕಲಿಯುವುದು ಅಗತ್ಯ. ಓದುವಾಗ ವಿಷಯದ ಮೇಲೆ ಪ್ರೀತಿ ಇದ್ದಾಗ, ಹೆಚ್ಚಿನ ಕಾಲ ನೆನಪು ಉಳಿಯುತ್ತದೆ ಹಾಗಾಗಿ ನಾವು ಓದುವ ವಿಷಯದ ಮೇಲೆ ಪ್ರೀತಿ ಇರಬೇಕು ಮತ್ತು ಓದಿದ್ದನ್ನು ಇನ್ನೊಬ್ಬರಿಗೆ ಹೇಳುವುದು ಒಳ್ಳೆಯ ಉಪಾಯ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಕತ್ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಾಮಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post