ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಟ್ಟೆ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ನಿಟ್ಟೆ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ



ನಿಟ್ಟೆ: ಜು.12 ರಂದು ನಿಟ್ಟೆ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಿಟ್ಟೆ ಕಾಲೇಜಿನ ಸಂಭ್ರಮ ಸಭಾಂಗಣದಲ್ಲಿ ನೆರವೇರಿತು. ಪದಗ್ರಹಣ ಅಧಿಕಾರಿಯಾಗಿ ೨೦೨೩-೨೪ ನೇ ಸಾಲಿನ ರೋಟರಿ ಜಿಲ್ಲೆ ೩೧೮೨ ನ ಗವರ್ನರ್ ಬಿ.ಸಿ. ಗೀತಾರವರು ಪದಗ್ರಹಣವನ್ನು ನೆರವೇರಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ನೂತನ ಅಧ್ಯಕ್ಷ ರೋ.ಡಾ.ಸುದೀಪ ಕೆ.ಬಿ, ಕಾರ್ಯದರ್ಶಿಯಾಗಿ ರೋ.ಡಾ.ಕೃಷ್ಣ ಪ್ರಸಾದ್ ಮತ್ತು ತಂಡ ಅಧಿಕಾರ ಸ್ವೀಕರಿಸಿದರು.

ನೂತನ ಅಧ್ಯಕ್ಷ ರೋ.ಡಾ.ಸುದೀಪ ಕೆ.ಬಿ ಅವರು 'ಮುಂದಿನ ಜನಾಂಗಕ್ಕೆ ಶುದ್ದ ಗಾಳಿ, ನೀರು, ನೆಲದ ಪ್ರಕೃತಿಯನ್ನು ಕೊಡುಗೆಯಾಗಿ ಕೊಡಲು ಸಹಕರಿಸುವಂತೆ ಕ್ಲಬ್ ನ ಸದಸ್ಯರಲ್ಲಿ ಕೋರಿದರು. ನಿಕಟಪೂರ್ವ ಅಧ್ಯಕ್ಷ ರೋ.ಗೋಪಾಲಕೃಷ್ಣ ಅವರು ಕಳೆದ ಬಾರಿಯ ಯೋಜನೆಗಳನ್ನು ಸಾಕಾರಗೊಳಿಸಲು ಸಹಕರಿಸಿದವರನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಡಾ.ಎನ್.ಎಸ್.ಎ.ಎಂ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಸ್ಮಿಶಾ ಅವರು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ೧೦ ನೇ ಸ್ಥಾನ ಪಡೆದಿರುವ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಪುಸ್ತಕ ವಿತರಣಾ ಯೋಜನೆಗೆ ಚಾಲನೆನೀಡಲಾಯಿತು. ಮಹಿಳೆಯೋರ್ವರಿಗೆ ಜೀವನೋಪಾಯಕ್ಕಾಗಿ ಹೊಲಿಗೆ ಯಂತ್ರ ವಿತರಣೆ ನಡೆಯಿತು. ಇದೇ ಸಂದರ್ಭದಲ್ಲಿ ನಿಟ್ಟೆ ರೋಟರಿ ಕ್ಲಬ್ ಗೆ ಮೂರು ಹೊಸ ಸದಸ್ಯರ ಸೇರ್ಪಡೆಗೊಂಡರು.

ಸಹಾಯಕ ಗವರ್ನರ್ ರೋ.ಡಾ.ಶಶಿಕಾಂತ್ ಕರಿಂಕ ಅವರು ಗೃಹಪತ್ರಿಕೆ ನಿರೂಪವನ್ನು ಬಿಡುಗಡೆಗೊಳಿಸಿ ಜಿಲ್ಲಾ ಯೋಜನೆಗಳನ್ನು ಸಭೆಯ ಮುಂದಿರಿಸಿದರು. ವಲಯ ಸೇನಾನಿ ರೋ.ಸುವರ್ಣ ನಾಯಕ್ ಅವರು ನೂತನ ತಂಡಕ್ಕೆ ಶುಭ ಹಾರೈಸಿದರು.

web counter

0 تعليقات

إرسال تعليق

Post a Comment (0)

أحدث أقدم