ಮಂಗಳೂರು: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ವತಿಯಿಂದ ತುಮಕೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ-2022 ರಲ್ಲಿ ಮಂಗಳೂರಿನ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಚರ್ಮರೋಗ ಕ್ಷಾರ ಚಿಕಿತ್ಸಕ ಹಾಗೂ ಮಿಶ್ರ ಪದ್ಧತಿ ವೈದ್ಯ ಡಾ ಸುರೇಶ ನೆಗಳಗುಳಿ ಇವರನ್ನು ಗುರುಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷರಾದ ಮಹೇಶ್ ಪಿ. ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
ತುಮಕೂರು ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಹಂತದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಕರ ಸಂಘಟನೆಯಾಗಿರುವ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ), ಮೈಸೂರು ತನ್ನ *ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ-2022" ವನ್ನು 24 ಜುಲೈ 2022 ರಂದು ಭಾನುವಾರ ಬೆಳಿಗ್ಗೆ 9.30ಕ್ಕೆ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಉದ್ದಾನೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.
ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಮಠಾಧ್ಯಕ್ಷರಾದ ಸಿದ್ದಲಿಂಗ ಮಹಾಸ್ವಾಮಿಗಳು, ಹಿತ್ತಲಹಳ್ಳಿ ಮಠದ ಡಾ.ಸದಾಶಿವ ಶಿವಾಚಾರ್ಯರು ವಹಿಸುವರು.ಕರ್ನಾಟಕ ಸರ್ಕಾರದ ಮಾನ್ಯ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ ಅವರು ಉದ್ಘಾಟನೆ ಮಾಡುವರು. ತುಮಕೂರು ಗ್ರಾಮಾಂತರದ ಶಾಸಕರಾದ ಡಿ ಸಿ ಗೌರಿಶಂಕರ ಅಧ್ಯಕ್ಷತೆವಹಿಸುವರು.
ತುಮಕೂರಿನ ಲೋಕಸಭಾ ಸದಸ್ಯರಾದ ಬಿ ಎಸ್ ಬಸವರಾಜು ಮತ್ತು ತುಮಕೂರು ನಗರದ* ಶಾಸಕರಾದ ಜಿ ಬಿ ಜ್ಯೋತಿಗಣೇಶ ಅವರು ಡಾ.ಎಸ್ ರಾಧಾಕೃಷ್ಣನ್ ಪ್ರಶಸ್ತಿಯನ್ನು ವಿತರಣೆ ಮಾಡುವರು. ತುರುವೇಕೆರೆ ಕ್ಷೇತ್ರದ ಶಾಸಕರಾದ ಮಸಾಲ ಜಯರಾಮ ಅವರು ಶಿಕ್ಷಣ ಚೇತನ ಪ್ರಶಸ್ತಿ ಪ್ರದಾನ ಮಾಡುವರು. ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ವೈ ಎ ನಾರಾಯಣಸ್ವಾಮಿ ಗುರು ಪುರಸ್ಕಾರ* ನೀಡುವರು. ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಬಿ ಜಿ ಕೃಷ್ಣಪ್ಪ ಗುರು ಶ್ರೇಷ್ಠ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸುವರು.
ಈ ಎಲ್ಲ ಪ್ರಶಸ್ತಿಗಳಿಗೆ ರಾಜ್ಯದ 70 ಶಿಕ್ಷಕರು ಭಾಜನರಾಗಿದ್ದಾರೆ. ಅವರಿಗೆ ಈ ಸಮಾರಂಭದಲ್ಲಿ ಗಣ್ಯಮಾನ್ಯರು ಒಟ್ಟು 1 ಲಕ್ಷದ 80 ಸಾವಿರ ರೂ.ಗಳ ನಗದು ಬಹುಮಾನ ನೀಡಲಾಗುವುದು.
ಅದೇ ದಿನ ಮಧ್ಯಾಹ್ನ 2.30 ಕ್ಕೆ ಜರುಗುವ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಹಿತ್ತಲಹಳ್ಳಿ ಮಠದ ಡಾ.ಸದಾಶಿವ ಶಿವಾಚಾರ್ಯರು ವಹಿಸುವರು. ತುಮಕೂರು ಗ್ರಾಮಾಂತರದ ಶಾಸಕರಾದ ಡಿ ಸಿ ಗೌರಿಶಂಕರ ಅಧ್ಯಕ್ಷತೆ ವಹಿಸುವರು. ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ ಸಿ ಮಾಧುಸ್ವಾಮಿ ಮತ್ತು ರಾಜ್ಯಸಭಾ ಸದಸ್ಯರಾದ ಜಗ್ಗೇಶ ಮತ್ತು ಕೊರಟಗೆರೆ ಕ್ಷೇತ್ರದ ಶಾಸಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ.ಜಿ ಪರಮೇಶ್ವರ ಹಾಗೂ ಗುಬ್ಬಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಶಿಕ್ಷಣ ಸಚಿವರಾದ ಎಸ್ ಆರ್ ಶ್ರೀನಿವಾಸ ಅವರು ರಾಜ್ಯದ ಸಾಧಕರಿಗೆ ಜನಸೇವಾ ರತ್ನ ಪ್ರಶಸ್ತಿ ನೀಡುವರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿ ಅವರು ರಾಜ್ಯದ ಉತ್ತಮ ಸಿ ಆರ್ ಪಿ ಗಳಿಗೆ ಕೊಡಮಾಡುವ "ಶಿಕ್ಷಣ ಸಾರಥಿ ಪ್ರಶಸ್ತಿ ಯನ್ನು ನೀಡಿ ಗೌರವಿಸುವರು. ಈ ಸಂದರ್ಭದಲ್ಲಿ ಅನೇಕ ಕ್ಷೇತ್ರಗಳ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿರುವರು.
ಬೆಂಗಳೂರಿನ ಚಲನಚಿತ್ರ ನಿರ್ದೇಶಕರಾದ ಶ್ರೀ ನೀನಾಸಂ ಮಂಜು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದ ಕನ್ನೇರಿ ಚಲನಚಿತ್ರದ ನಿರ್ದೇಶಕರು ಮತ್ತು ಚಲನಚಿತ್ರ ತಂಡದವರನ್ನು ಅಭಿನಂದನಿಸಿ ಸನ್ಮಾನಿಸಲಾಗುವುದು. ಚಲನಚಿತ್ರ ನಟರಾದ ಶ್ರೀ ಸಾಯಿಪ್ರಕಾಶ,ಚಲನಚಿತ್ರ ನಟ ಮತ್ತು ನಿರ್ದೇಶಕರಾದ ಗಂಡಸಿ ಸದಾನಂದಸ್ವಾಮಿ, ಚಲನಚಿತ್ರ ನಟಿ ಮತ್ತು ನಿರ್ಮಾಪಕರಾದ ಶ್ರೀಮತಿ ಇಳಾವಿಟ್ಲ ಅವರು ಭಾಗವಹಿಸುವರು.
ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಪಿ ಮಹೇಶ, ರಾಜ್ಯ ಉಪಾಧ್ಯಕ್ಷರುಗಳಾದ ವಿ ಜಿ ಅಗ್ರಹಾರ ಹಾಗೂ ರೇಖಾ ದಳವಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ಕುಮಾರ ಎಸ್ ಬಂಡೆ, ರಾಜ್ಯ ಕೋಶಾಧ್ಯಕ್ಷರಾದ ಎನ್ ಚಲುವೇಗೌಡ, ರಾಜ್ಯ ಸಹ ಕಾರ್ಯದರ್ಶಿಗಳಾದ ಎಸ್ ಸುಮತಿ, ಕೈದಾಳ ರಂಗಸ್ವಾಮಿ ಮತ್ತು ರಾಜ್ಯ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ ನಾಯಕ ಸೇರಿದಂತೆ ಅನೇಕ ರಾಜ್ಯ ಪದಾಧಿಕಾರಿಗಳು ಭಾಗವಹಿಸುವರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق