ಮಂಗಳೂರು: ಕುದ್ಮುಲ್ ರಂಗರಾಯರ ಸಮಾಧಿ ಅಭಿವೃದ್ಧಿಗೆ 3 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾಯರ ಸಮಾಧಿಯ ಬಳಿ ಮಂಗಳೂರು ನಗರ ದಕ್ಷಿಣ ಭಾರತೀಯ ಜನತಾ ಪಾರ್ಟಿಯ ಎಸ್. ಸಿ ಮೋರ್ಚಾ ಹಾಗೂ ಕುದ್ಮುಲ್ ರಂಗರಾವ್ ಎಜುಕೇಷನ್ ಟ್ರಸ್ಟ್ ವತಿಯಿಂದ ಕುದ್ಮುಲ್ ರಂಗ ರಾವ್ ಅವರ 163ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗೌರವ ಸಲ್ಲಿಸಿ ಮಾತನಾಡಿದ ಶಾಸಕ ಕಾಮತ್, ರಂಗರಾಯರು ಅಸ್ಪೃಶ್ಯತೆ, ಅಸಮಾನತೆಯನ್ನು ಮೆಟ್ಟಿ ನಿಂತು ದಲಿತ ಸಮುದಾಯದ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ವರ್ಷದಿಂದ ಕುದ್ಮುಲ್ ರಂಗರಾವ್ ಜಯಂತಿ ಆಚರಣೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದಲೇ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಸಾಮಾಜಿಕ ಅಸ್ಪೃಶ್ಯತೆ ನಿವಾರಣೆಯ ವಿಚಾರದಲ್ಲಿ ಸ್ವತಃ ಗಾಂದೀಜಿಯವರೇ ರಂಗರಾಯರಿಂದ ಪ್ರೇರಣೆ ಪಡೆದಿದ್ದರು ಎನ್ನುವುದೇ ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಹಾಗಾಗಿ ಅವರ ಸಮಾಧಿಯನ್ನು 3 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಮುಂದಿನ ಪೀಳಿಗೆಗೆ ರಂಗರಾಯರ ಬದುಕು ಪ್ರೇರಣೆಯಾಗಬೇಕೆನ್ನುವ ನೆಲೆಯಲ್ಲಿ ಸಮಾಧಿಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಮಂಗಳೂರು ನಗರ ಮಂಡಲ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಪಾಲಿಕೆ ಸದಸ್ಯರಾದ ಶೈಲೇಶ್ ಶೆಟ್ಟಿ, ಮನೋಜ್ ಕುಮಾರ್, ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟಿನ ಉಪಾಧ್ಯಕ್ಷರಾದ ಶ್ಯಾಮ ಕರ್ಕೇರ, ಕಚ್ಚೂರು ಮಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದ ಅಧ್ಯಕ್ಷರಾದ ಶಿವಪ್ಪ ನಂತೂರು, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ವಿನಯ್ ನೇತ್ರಾ ದಡ್ಡಲ್ ಕಾಡ್, ಎಸ್.ಸಿ ಮೋರ್ಚಾ ಪ್ರಭಾರಿ ಮೀರಾ ಕರ್ಕೇರ, ಪಶ್ಚಿಮ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ದೀಪಕ್ ಪೈ, ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗೇಶ್ ಕೊಡಕ್ಕಲ್, ಪ್ರಜ್ವಲ್ ಚಿಲಿಂಬಿ, ಪದಾಧಿಕಾರಿಗಳಾದ ಗೀತಾ ಸುಂಕದಕಟ್ಟೆ, ಗಣೇಶ್ ನಾಗುರಿ, ಸಂದೀಪ್ ಬೋಳೂರು, ಸಂಪತ್ ಕುಮಾರ್, ಸತೀಶ್ ಅರಕೆರೆಬೈಲು, ಬೂತ್ ಅಧ್ಯಕ್ಷೆ ಅರ್ಚನಾ ರೈ, ಪ್ರಮೋದ್ ಕೊಟ್ಟಾರಿ, ಗಣಪತಿ ಪದವಿಪೂರ್ವ ಕಾಲೇಜು ಉಪನ್ಯಾಸಕರಾದ ಪುಟ್ಟಸ್ವಾಮಿ, ಎಜುಕೇಶನ್ ಟ್ರಸ್ಟಿಗಳಾದ ದಯಾಕರ್ ಬಿ.ಆರ್, ವಸಂತ ಬಂಗೇರ, ಶಶಿಕಾಂತ್ ಬಿ.ಆರ್ ಉಪಸ್ಥಿತರಿದ್ದರು. ಬಿಜೆಪಿ ಮಂಗಳೂರು ನಗರ ದಕ್ಷಿಣ ಎಸ್.ಸಿ ಮೋರ್ಚಾ ಅಧ್ಯಕ್ಷರಾದ ರಘುವೀರ್ ಬಾಬುಗುಡ್ಡೆ ಸ್ವಾಗತಿಸಿ ವಂದನಾರ್ಪಣೆಗೈದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق