ಬದಿಯಡ್ಕ: ದೇಶಿಯ ಅಧ್ಯಾಪಕ ಪರಿಷತ್ತು ಕುಂಬಳೆ ಉಪಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸಭೆಯು ಬದಿಯಡ್ಕ ಗಣೇಶ ಮಂದಿರದಲ್ಲಿ ಜರಗಿತು. ಜಿಲ್ಲಾ ಅಧ್ಯಕ್ಷ ರಂಜಿತ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕಾಸರಗೋಡಿನ ಜಿಲ್ಲಾ ವಿದ್ಯಾಧಿಕಾರಿಗಳಾಗಿ ಕನ್ನಡೇತರರನ್ನು ನೇಮಿಸಿರುವ ಸರಕಾರದ ನಿಲುವನ್ನು ತೀವ್ರವಾಗಿ ಖಂಡಿಸಲಾಯಿತು.
ಜುಲೈ ೨ರಂದು ದೇಶಿಯ ಅಧ್ಯಾಪಕ ಪರಿಷತ್ತಿನ ವತಿಯಿಂದ ನಡೆಯುವ ಧರಣಿ ಮುಷ್ಕರದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ತೀರ್ಮಾನಿಸಲಾಯಿತು. ಹಾಗೆ ಎಲ್‌ಪಿ ಮತ್ತು ಯುಪಿ ವಿಭಾಗದ ಅಧ್ಯಾಪಕರ ನೇಮಕಕ್ಕೆ ಸುತ್ತೋಲೆಯನ್ನು ಹೊರಡಿಸಲು ಕೇರಳ ಲೋಕ ಸೇವಾ ಆಯೋಗವನ್ನು ಒತ್ತಾಯಿಸಲಾಯಿತು. ಸದಸ್ಯತನ ಅಭಿಯಾನವನ್ನು ಮುಂದಿನ ತಿಂಗಳಿನಿಂದ ಪ್ರಾರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಹಾಬಲ ಭಟ್, ಕವಿತಾ ಟೀಚರ್ ವಿದ್ಯಾ ಟೀಚರ್, ಪುಷ್ಪ ಟೀಚರ್, ರಾಜೇಶ್ ಉಬ್ರಂಗಳ ಉಪಸ್ಥಿತರಿದ್ದರು. ಚಂದ್ರಶೇಖರ್ ಮಾಸ್ಟರ್ ಸ್ವಾಗತಿಸಿ, ಉಪ ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ ಧನ್ಯವಾದವಿತ್ತರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق