ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಿ.ಪಿ.ಪಿ.ಎ.ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ

ಬಿ.ಪಿ.ಪಿ.ಎ.ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ


ಧರ್ಮತ್ತಡ್ಕ: ಬಾಡೂರು ಪೆರ್ಮುದೆ ಎ.ಎಲ್‌.ಪಿ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ ವಿಜೃಂಭಣೆಯಿಂದ, ವಿವಿಧ ಮನೋರಂಜನ ಕಾರ್ಯಕ್ರಮಗಳೊಂದಿಗೆ ಜರಗಿತು. ವಾರ್ಡು ಸದಸ್ಯೆ ಇರ್ಷಾನ ಇಸ್ಮಾಯಿಲ್, ಶಾಲಾ ಪ್ರಬಂಧಕರಾದ ಇ. ರವಿಶಂಕರ ಭಟ್, ಮಾಜಿ ವಾರ್ಡು ಸದಸ್ಯ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪೈವಳಿಕೆ ಗ್ರಾಮ ಪಂಚಾಯತು ಎಂ.ಕೆ. ಅಮೀರ್, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ ಎ, ಪಿ.ಟಿ.ಎ ಅಧ್ಯಕ್ಷರಾದ ಮೊಹಮ್ಮದಾಲಿ, ಎಂ.ಪಿ.ಟಿ.ಎ ಅಧ್ಯಕ್ಷರಾದ ಶ್ರೀಮತಿ ಚೇತನ, ಶಾಲಾ ಮುಖ್ಯೋಪಾಧ್ಯಾಯರಾದ ಸದಾಶಿವ ಕೆ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ವಾರ್ಡು ಸದಸ್ಯೆ ಇರ್ಷಾನ ಇಸ್ಮಾಯಿಲ್ ಉದ್ಘಾಟಿಸಿ ನವಾಗತ ಮಕ್ಕಳಿಗೆ ಕಲಿಕೋಪರಕರಣ ಕಿಟ್ ವಿತರಿಸಿ ಸ್ವಾಗತಿಸಿ ಶುಭಹಾರೈಸಿದರು. ಮಾಜಿ ವಾರ್ಡು ಸದಸ್ಯ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪೈವಳಿಕೆ ಗ್ರಾಮ ಪಂಚಾಯತು ಎಂ.ಕೆ.ಅಮೀರ್, ಶಾಲಾ ಪ್ರಬಂಧಕರಾದ ಇ. ರವಿಶಂಕರ ಭಟ್,  ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ ಎ, ಪಿ.ಟಿ.ಎ ಅಧ್ಯಕ್ಷರಾದ ಮೊಹಮ್ಮದಾಲಿ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಚೇತನ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಸದಾಶಿವ ಕೆ.ಕೆ ಸ್ವಾಗತಿಸಿದರು. ಸ್ಮಿತಾ ಟೀಚರ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಾಪಕರಾದ ಅಬ್ದುಲ್ ಮುನೀರ್ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

1 Comments

Post a Comment

Post a Comment

Previous Post Next Post