ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಹಾಗೂ ಪೌರರಕ್ಷಣೆ ತಂಡಕ್ಕೆ ಕೇಂದ್ರ ಕಚೇರಿಯಿಂದ ನೀಡಲಾದ ಎರಡು ಇನ್‍ಫ್ಲೇಟೇಬಲ್ ಬೋಟ್‍ಗಳ ಪ್ರಾಯೋಗಿಕ ಬಳಕೆ ಮತ್ತು ಅಣುಕು ಪ್ರದರ್ಶನ (ಟ್ರಯಲ್ ರನ್) ಅನ್ನು ದಿನಾಂಕ 02-06-2022ನೇ ಬುಧವಾರದಂದು ಕೂಳೂರು ಬಳಿ ಗುರುಪುರ ನದಿಯ ಹಿನ್ನೀರಿನಲ್ಲಿ ಜರುಗಿತು.
ಜಿಲ್ಲಾಡಳಿತ ಕಳೆದ ವರ್ಷ ಗೃಹರಕ್ಷಕದಳಕ್ಕೆ 3 ಇನ್‍ಫ್ಲೇಟೇಬಲ್ ಬೋಟ್‍ಗಳನ್ನು ನೀಡಿತ್ತು. ಕೇಂದ್ರ ಕಚೇರಿಯಿಂದ ಮತ್ತೆ ಎರಡು ಬೋಟ್‍ಗಳು ಸೇರ್ಪಡೆಯಾಗಿದೆ. ಗೃಹರಕ್ಷಕದಳದಲ್ಲಿ ಒಟ್ಟು 6 ಬೋಟ್‍ಗಳು ಇವೆ, ಇವುಗಳು ಸುಬ್ರಹ್ಮಣ್ಯ, ಉಪ್ಪಿನಂಗಡಿ, ಬಂಟ್ವಾಳ, ಮಂಗಳೂರಿನಲ್ಲಿ 2, ಮೂಲ್ಕಿಯಲ್ಲಿರುತ್ತದೆ. ಇದರೊಂದಿಗೆ ನುರಿತ ಈಜುಪಟುಗಳು, ಚಾಲಕರು ಇರುತ್ತಾರೆ. ನೆರೆ ಸಂದರ್ಭ ಜಿಲ್ಲಾಧಿಕಾರಿಯವರ ಆದೇಶದಂತೆ ಅಗ್ನಿಶಾಮಕದಳದೊಂದಿಗೆ ಸೇರಿ ಜನರು ಮತ್ತು ಆಸ್ತಿಪಾಸ್ತಿಗಳ ರಕ್ಷಣೆಗೆ ಬಳಕೆ ಮಾಡಲಾಗುತ್ತದೆ ಎಂದು ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ತಿಳಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಹೊಸ ಬೋಟ್‍ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಜಿಲ್ಲಾಧಿಕಾರಿಯವರ ಆದೇಶದಂತೆ ಟ್ರಯಲ್ ರನ್ ಮತ್ತು ಅಣುಕು ಪರೀಕ್ಷೆ ಮಾಡಲಾಗಿದೆ. ಎಲ್ಲ ಬೋಟ್‍ಗಳು ಸುಸ್ಥಿತಿಯಲ್ಲಿವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗೃಹರಕ್ಷಕದಳದ ಉಪ ಸಮಾದೇಷ್ಟರಾದ ರಮೇಶ್, ಮಾರ್ಕ್ ಶೇರಾ, ಪ್ರವಾಹ ರಕ್ಷಣಾ ತಂಡದ ಸದಸ್ಯರಾದ ದಿವಾಕರ್, ಪ್ರಸಾದ್, ನಿಕಿಲ್, ಕನಕಪ್ಪ, ವಿನಯ್, ಪ್ರದೀಪ್, ಲೀಲಾಧರ ಮುಂತಾದವರು ಉಪಸ್ಥಿತರಿದ್ದರು. ಪೌರರಕ್ಷಣಾ ತಂಡದ ಕಾರ್ಯಕರ್ತರಾದ ಸಂತೋಷ್ ಪೀಟರ್, ನಿತಿನ್, ಅಜಯ್, ಅಂಜನ್ ಮುಂತಾದವರು ಈ ಅಣುಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
Post a Comment