ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆರವಿಗೆ ಕೋರಿಕೆ: ಈ ಪ್ರತಿಭಾವಂತ ಪುಟಾಣಿಯ ಹೃದಯ ಚಿಕಿತ್ಸೆಗೆ ನೆರವಾಗಿ

ನೆರವಿಗೆ ಕೋರಿಕೆ: ಈ ಪ್ರತಿಭಾವಂತ ಪುಟಾಣಿಯ ಹೃದಯ ಚಿಕಿತ್ಸೆಗೆ ನೆರವಾಗಿ


ನಮೋ ನಮ:

ಆತ್ಮೀಯ ಮೈತ್ರೀ ಬಾಂಧವರೇ,

ಪ್ರತಿಭಾವಂತ ಐದು ವರ್ಷ ಹೆಣ್ಣುಮಗುವಾದ "ದ್ಯುತಿ"ಯು ವೇದ, ಉಪನಿಷತ್ ಹಾಗೂ ಭಗವದ್ಗೀತೆ ಪಾರಾಯಣದಲ್ಲಿ ಇಂಡಿಯನ್ ಬುಕ್ ಆಫ್‌ ರೆಕಾರ್ಡ್ಸ್ ಪ್ರಶಸ್ತಿ ಪಡೆದಿದ್ದಾಳೆ.

ಈ ಮಗುವಿಗೆ ಹುಟ್ಟಿನಿಂದಲೇ ಹಲವು ದೈಹಿಕ ನ್ಯೂನತೆಗಳು ಇದ್ದರೂ ಅದೆಲ್ಲವನ್ನು ಸಮಗ್ರವಾಗಿ ಮೆಟ್ಟಿನಿಂತು  ಚಿಕ್ಕ ವಯಸ್ಸಿನಲ್ಲೇ ವೇದ ಉಪನಿಷತ್ತುಗಳ ವಿಚಾರಗಳ ಬಗ್ಗೆ ಆಸಕ್ತಿವಹಿಸಿ ಶ್ಲೋಕಗಳನ್ನು ಪಠನ ಮಾಡುವ ಮೂಲಕ ನಮ್ಮೆಲ್ಲರಿಗೂ ಮಾದರಿಯಾಗಿದ್ದಾಳೆ.

ಇಂತಹ ಮಗು ಇಂದು ಹೃದಯ ಸಂಬಂಧಿ ಖಾಯಿಲೆಯಿಂದ ನರಳುತ್ತಿದ್ದಾಳೆ. ಪರಿಸ್ಥಿತಿ ಹದಗೆಟ್ಟಿರುವುದರಿಂದ ಈಗ ಅವಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ, ಅವಳ ಹೃದಯದಲ್ಲಿ ಎರಡು ರಂಧ್ರಗಳು ಇವೆ.  ತುರ್ತಾಗಿ ಶಸ್ತ್ರ ಚಿಕಿತ್ಸೆ ನಡೆಸಬೇಕಾಗಿರುವುದರಿಂದ ಖರ್ಚು ಸುಮಾರು 2 ರಿಂದ 3 ಲಕ್ಷ ಬೇಕೆಂದು ವೈದ್ಯರು ಹೇಳಿರುತ್ತಾರೆ.

"ದ್ಯುತಿ"ಯ ಪೋಷಕರು ಆರ್ಥಿಕವಾಗಿ ಅನುಕೂಲಸ್ಥರಲ್ಲ. ಹಾಗಾಗಿ ತಾವೆಲ್ಲರೂ ತುರ್ತಾಗಿ "ದ್ಯುತಿ"ಯ ಪೋಷಕರಿಗೆ ತಮ್ಮ ಶಕ್ತ್ಯಾನುಸಾರ ಆರ್ಥಿಕ ಸಹಾಯ ಮಾಡಬೇಕೆಂದು ಮೈತ್ರೀ ಸಂಸ್ಕೃತ ಸಂಸ್ಕೃತಿ ಪ್ರತಿಷ್ಠಾನ ವತಿಯಿಂದ ತಮ್ಮಲ್ಲಿ ವಿನಂತಿಸಲಾಗಿದೆ.

ಬ್ಯಾಂಕ್ ಡೀಟೇಲ್ಸ್ ಹೀಗಿದೆ 

===================

ಸುದರ್ಶನ್

ಅಕೌಂಟ್ ನಂಬರ್ : 0794101025479 

IFC  ಕೋಡ್ CNRB0000794 

ಕೆನರಾ ಬ್ಯಾಂಕ್, ಶೇಷಾದ್ರಿಪುರಂ ಬ್ರಾಂಚ್ 

GPAY No . 9880737086 

ಪೋಷಕರ ಹೆಸರು : ಸುದರ್ಶನ್, ಶಿಲ್ಪಶ್ರೀ 


ಈ ಹಿಂದೆ "ದ್ಯುತಿ"ಯು ಪ್ರತಿಷ್ಠಾನದ ಗೀತಾ ಜಯಂತಿಯಂದು ಭಗವದ್ಗೀತೆಯ ಶ್ಲೋಕಗಳನ್ನು ಪಾರಾಯಣ ಮಾಡುವ ಮೂಲಕ ನಮ್ಮೆಲ್ಲರ ಮನಸ್ಸನ್ನು ಗೆದ್ದಿರುತ್ತಾಳೆ, ಅವಳು ತನ್ನ ಜೀವನದಲ್ಲಿ ಮತ್ತಷ್ಟು ಅಮೋಘವಾದ ಸಾಧನೆ ಮಾಡಿ, ನಾಡಿಗೆ ಹೆಮ್ಮೆ ತರಲಿ ಎನ್ನುವುದು ನಮ್ಮೆಲ್ಲರ ಆಶಯ.

"ದ್ಯುತಿ"ಯು ಶೀಘ್ರವಾಗಿ ಗುಣಮುಖವಾಗಲು ತಮ್ಮೆಲ್ಲರ ಪ್ರಾರ್ಥನೆ ಹಾಗೂ ಆರ್ಥಿಕ ಸಹಾಯ ಬಹಳ ಅತ್ಯಗತ್ಯವಾಗಿದೆ, ಆದ್ದರಿಂದ "ದ್ಯುತಿ" ಯ ಪೋಷಕರಿಗೆ ಸಹಾಯ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಲು ತಮ್ಮೆಲ್ಲರಿಗೂ ಮನವಿ, "ದ್ಯುತಿ"ಗೆ ಹರಸುವಿರೆಂದು ನಂಬಿದ್ದೇವೆ.

- ಮೈತ್ರೀ ಪರಿವಾರ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


0 تعليقات

إرسال تعليق

Post a Comment (0)

أحدث أقدم