ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹವ್ಯಕ ಮಹಾಮಂಡಲದ ಗುಂಪೆ ವಲಯ ಸಭೆ

ಹವ್ಯಕ ಮಹಾಮಂಡಲದ ಗುಂಪೆ ವಲಯ ಸಭೆ



ಕಾಸರಗೋಡು: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಹವ್ಯಕ ಮಹಾಮಂಡಲದ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ ಸಭೆಯು ಶನಿವಾರ (ಜೂ 4) ಗುಂಪೆ ವಲಯ ಕಛೇರಿಯಲ್ಲಿ ನಡೆಯಿತು.


ಧ್ವಜಾರೋಹಣ, ಶಂಖನಾದ ಗುರುವಂದನೆ ಗೋಸ್ತುತಿಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು  ವಲಯಾಧ್ಯಕ್ಷರಾದ ಬಿ.ಎಲ್. ಶಂಭು ಹೆಬ್ಬಾರ್ ವಹಿಸಿದರು.


ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಗತಸಭೆಯ ವರದಿ ಮತ್ತು ಮಹಾಮಂಡಲ ಸುತ್ತೋಲೆಯನ್ನು ವಾಚಿಸಿದರು.


ಜೂನ್ 13 ರಂದು ನೆರವೇರಲಿರುವ ಸೇವಾಸೌಧ ಪ್ರವೇಶದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.  


ವಿವಿವಿ- ಸೇವಾ ಸೌಧ ಮತ್ತು ಸಂಘಂಟಾನಾತ್ಮಕ ವಿಷಯಗಳನ್ನು ಪ್ರತಿಯೊಬ್ಬ ಶಿಷ್ಯ ಬಾಂಧವರ ಗಮನಕ್ಕೆ ತರಲು ನಡೆಸಿದ ಮನೆಮನೆ ಅಭಿಯಾನದ ಕುರಿತಾದ ಮಾಹಿತಿಯನ್ನು ಸಭೆಗೆ ನೀಡಲಾಯಿತು.


ಕೋಶಾಧ್ಯಕ್ಷರಾದ ಅಮ್ಮಂಕಲ್ಲು ರಾಜಗೋಪಾಲ ಭಟ್ ಮೇ ತಿಂಗಳ ಲೆಕ್ಕಪತ್ರ ವಾಚಿಸಿದರು. ಉಪಾಸನಾ ವಿವರಗಳನ್ನು ನೀಡಲಾಯಿತು. ಶ್ರೀರಾಮ ತಾರಕ ಜಪ, ಶ್ರೀರಾಮ ಭುಜಂಗ ಸ್ತೋತ್ರಗಳನ್ನು ಪ್ರತಿ ಮನೆಯವರು ಪಠಿಸುವಂತೆ ಕೋರಲಾಯಿತು.


ಈ ಸಂದರ್ಭದಲ್ಲಿ ಶಿಷ್ಯಬಾಂಧವರು ಸೇವಾಸೌಧಕ್ಕೆ ಸಮರ್ಪಣೆ ಮಾಡಿದರು. ಶ್ರೀರಾಮ ತಾರಕ ಜಪ, ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post