ಕಡಬ : ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೆಂಜಲ ಶಾಖೆಯಲ್ಲಿ ಅಡಿಕೆ ಖರೀದಿ ಕೇಂದ್ರವನ್ನು ಕ್ಯಾಂಪ್ಕೋ ಸಂಸ್ಥೆ ಮತ್ತು ಬಿಳಿನೆಲೆ ಸಹಕಾರ ಸಂಘದ ಸಹಭಾಗಿತ್ವದಲ್ಲಿ ದಿನಾಂಕ 3-6-22 ರ ಶುಕ್ರವಾರ ಪ್ರಾರಂಭವಾಯಿತು.
ಉದ್ಘಾಟನೆಯನ್ನು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ಕೊಡ್ಗಿ ರವರು ನೆರವೇರಿಸಿದರು.
ಉದ್ಘಾಟಿಸಿದ ಉದ್ಘಾಟಕರು ಮಾತನಾಡುತ್ತಾ ರೈತರು ಅಡಿಕೆಯ ಬೆಲೆ ಕುಸಿಯುವ ಬಗ್ಗೆ ಭಯಪಡುವ ಅಗತ್ಯವಿಲ್ಲ ಬೆಲೆ ಕುಸಿತ ತಾತ್ಕಾಲಿಕ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದರು.
ಕ್ಯಾಂಪ್ಕೋ ನಿರ್ದೇಶಕರಾದ ಶ್ರೀ ಕೃಷ್ಣಪ್ರಸಾದ್ ಮಡ್ತಿಲ ರವರು ಮಾತನಾಡಿ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದಲ್ಲಿ ರೈತರ ಕೃಷಿ ವಸ್ತುಗಳಿಗೆ ನ್ಯಾಯಯುತ ಬೆಲೆ ಸಿಗುವುದು ಶತಸಿದ್ಧ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಳಿನೆಲೆ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ದಾಮೋದರ ಗುಂಡ್ಯ ರವರು ವಹಿಸಿದ್ದರು.
ವೇದಿಕೆಯಲ್ಲಿ ಕ್ಯಾಂಪ್ಕೋ ವ್ಯಯ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ಖಂಡಿಗೆ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ರೇಷ್ಮಾ ಮಲ್ಯ ನಿರ್ದೇಶಕರಾದ ರಾಘವೇಂದ್ರ ಭಟ್ ಶ್ರೀ ಎನ್ ಮಹೇಶ್ ಚೌಟ ಎಪಿಎಂಸಿ ನಿರ್ದೇಶಕರಾದ ಕೊಂಬಾರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುಶೀಲಾ ಶ್ರೀಮೇದಪ್ಪ ಡಿ ಪುಣೆ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾದ ರಮೇಶ್ ಕಲ್ಪುರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಕೃಷ್ಣ ಶೆಟ್ಟಿ ಕಡಬ, ವಾಡ್ಯಪ್ಪ ಗೌಡ ಎರ್ಮಾಯಿಲ ಪ್ರಗತಿಪರ ಕೃಷಿಕರಾದ ಶ್ರೀ ಶಿವಪ್ರಸಾದ್ ಮತ್ತು ಶ್ರೀ ಪುರುಷೋತ್ತಮ ಕಾಪಾರು ಉಪಸ್ಥಿತರಿದ್ದರು.
ಸಹಕಾರ ಸಂಘದ ಉಪಾಧ್ಯಕ್ಷರಾದ ವೆಂಕಟರಮಣ ಸ್ವಾಗತಿಸಿದರು. ಶ್ರೀ ಚಿದಾನಂದ ದೇವು ಪಾಲ್ ವಂದಿಸಿದರು. ಕುಮಾರಿ ಅಶ್ವಿತಾ ಪ್ರಾರ್ಥಿಸಿದರು. ಶ್ರೀ ಪರಮೇಶ್ವರ ರವರು ಕಾರ್ಯಕ್ರಮ ನಿರೂಪಿಸಿದರು
Post a Comment