ಬದಿಯಡ್ಕ: ಕೇರಳ ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕದ ಸಹಯೋಗದಲ್ಲಿ ಡಾ. ವಾಣಿಶ್ರೀ ಇವರ ಸಾರಥ್ಯದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಇವರ ವತಿಯಿಂದ ಮೇ 31 ರಂದು ಹಗಲುಮನೆ ಬೋಳುಕಟ್ಟೆ ಬದಿಯಡ್ಕ ಇಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜರುಗಿತು.
ಸಭಾ ಕಾರ್ಯಕ್ರಮವನ್ನು ಡಾ. ಶ್ರೀನಿಧಿ ಸರಳಾಯ ವೈದ್ಯರು ಸಾಹಿತಿಗಳು ಬದಿಯಡ್ಕ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು. ಬದಿಯಡ್ಕ ಗ್ರಾ.ಪಂ. ಅಧ್ಯಕ್ಷೆ ಶಾಂತಾ ಬಾರಡ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಪಿಲಿಂಗಲ್ ಶ್ರೀಕೃಷ್ಣ ಭಟ್ ಇವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಬದಿಯಡ್ಕ ಪಂಚಾಯತ್ ವಾರ್ಡ್ ಸದಸ್ಯ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದರು. ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕದ ಕಾರ್ಯದರ್ಶಿ ಶಂಕರನಾರಾಯಣ ಭಟ್ ಸಂಪತ್ತಿಲ ಇವರು ಸ್ವಾಗತಿಸಿದರು. ಪ್ರಣಮ್ಯಾದೇವಿ ಪ್ರಾರ್ಥನೆ ಮಾಡಿದರು.
ಡಾ. ವಾಣಿಶ್ರೀ ಕಾಸರಗೋಡು ಇವರು ಕಾರ್ಯಕ್ರಮ ನಿರೂಪಿಸುತ್ತ, ಆಯುರ್ವೇದದ ಮಹತ್ವ ವಿಚಾರಗಳನ್ನು ಹಂಚಿಕೊಂಡರು. ಗುರುರಾಜ್ ಕಾಸರಗೋಡು ಇವರು ಧನ್ಯವಾದ ಗೈದರು. ಗಡಿನಾಡ ಸಂಘದ ಕೋಶಾಧಿಕಾರಿ ಡಾ. ವೆಂಕಟ ಗಿರೀಶ್, ಗಡಿನಾಡ ಸಂಘದ ಉಪಾಧ್ಯಕ್ಷರು ಅಚ್ಯುತ ಭಟ್ ಪೊಟ್ಟಿಪ್ಪಲ, ಉಪಸ್ಥಿತರಿದ್ದರು. ಕೇರಳ ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕದ ಅಧ್ಯಕ್ಷರು ಪೆರ್ಮುಖ ಈಶ್ವರ ಭಟ್ ಇವರು ಕಾರ್ಯಕ್ರಮ ನಡೆಸಲು ಅನುವು ಮಾಡಿ ಕೊಟ್ಟರು.
إرسال تعليق