ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಿಕ್ಷಣ ವ್ಯಾಪಾರವಾಗದಿರಲಿ: ರವೀಂದ್ರ ಉಳಿದೊಟ್ಟು

ಶಿಕ್ಷಣ ವ್ಯಾಪಾರವಾಗದಿರಲಿ: ರವೀಂದ್ರ ಉಳಿದೊಟ್ಟು

ಉಳ್ಳಾಲ ಕಸಾಪ 'ಕನ್ನಡ ಸಂಭ್ರಮ' ಉದ್ಘಾಟನೆ



ಮುಡಿಪು: ಇಂದು ಶಿಕ್ಷಣ ಸಂಸ್ಥೆಗಳು ವ್ಯಾಪಾರ ಕೇಂದ್ರಗಳಾಗಿ ಬದಲಾಗುತ್ತಿವೆ. ದೇಶ ನಿರ್ಮಾಣ ಮಾಡುವ, ಸಮಾನತೆಯ ಸಮಾಜವನ್ನು ರೂಪಿಸುವ ವಿದ್ಯಾಕೇಂದ್ರಗಳು ಭಾಷೆ, ಸಾಹಿತ್ಯ ಸಂಸ್ಜೃತಿ ಕುರಿತು ಅಭಿಮಾನ ಹುಟ್ಟಿಸುವ ಕಾರ್ಯಕ್ರಮಗಳನ್ನು ನಡೆಸಬೇಕಿದೆ ಎಂದು ಕರ್ನಾಟಕ ಸರಕಾರದ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ರೈ ಉಳಿದೊಟ್ಟು ಹೇಳಿದರು. 


ಅವರು ಶನಿವಾರ  ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ದೇರಳಕಟ್ಟೆ ವಿದ್ಯಾರತ್ನ ವಿದ್ಯಾಲಯದಲ್ಲಿ ನಡೆದ ಕನ್ನಡ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಸಮಾಜದಲ್ಲಿ ಮನಸ್ಸನ್ನು ಆರೋಗ್ಯಯುತವಾಗಿಡುವ ಸಾಹಿತ್ಯ ಚಟುವಟಿಕೆಗಳು ಹೆಚ್ಚಾಗಬೇಕಿದ್ದು ಸಾಹಿತ್ಯ ಪರಿಷತ್ತಿನ ಸದಸ್ಯರಾಗುವ ಮೂಲಕ ಕನ್ನಡ ಚಟುವಟಿಕೆಗಳಿಗೆ ಬೆಂಬಲ ನೀಡಬೇಕು ಎಂದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಂಬಯಿ ಕಲಾ ಜಗತ್ತಿನ ನಿರ್ದೇಶಕ, ಸಿನಿಮಾ ನಿರ್ಮಾಪಕ ಡಾ. ವಿಜಯ ಕುಮಾರ್ ತೋನ್ಸೆ ಮಾತನಾಡಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಕಲರವ ಉಂಟುಮಾಡುವ ಉಳ್ಳಾಲ ಕಸಾಪದ ಪ್ರಯತ್ನ ಶ್ಲಾಘನೀಯ. ಮಕ್ಕಳಿಗೆ ಪುಸ್ತಕದ ಓದಿನ ಜೊತೆಗೆ ಜೀವನ ಪಾಠವನ್ನು ವಿವರಿಸಬೇಕಿದೆ ಎಂದರು


ಕನ್ನಡ ಹೃದಯದ ಭಾಷೆ: ಕುಂಬ್ಳೆ


ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ ಜಿಲ್ಲಾ ಕಸಾಪ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಮಾತನಾಡಿ ಕನ್ನಡ ನಮ್ಮ ಹೃದಯದ ಭಾಷೆ. ಇಂಗ್ಲಿಷ್ ವ್ಯಾವಹಾರಿಕ ಭಾಷೆ. ಇಂಗ್ಲಿಷ್ ನಿಂದ ಪದವಿ ಉದ್ಯೋಗ ಸಿಗಬಹುದು. ಆದರೆ ಕನ್ನಡ ತುಳುವಿನಿಂದ ನೆಮ್ಮದಿ ದೊರಕುವುದು. ಎಲ್ಲಿ ಹೋದರೂ ಮಾತೃಭಾಷೆ ಮತ್ತು  ನರಕದ ಸಂಬಂಧಗಳನ್ನು ಮರೆಯದಿರೋಣ ಎಂದರು.


ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಕಲ್ಲಿಮಾರು ಇವರು ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ: ಸ್ವರೂಪ ಮತ್ತು ವಿನ್ಯಾಸ ಎಂಬ ವಿಷಯದ ಕುರಿತಾಗಿ ಮಾರ್ಗದರ್ಶಿ ಉಪನ್ಯಾಸ ನೀಡಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಉದ್ಯಮಿ ಲ. ಚಂದ್ರಹಾಸ ಶೆಟ್ಟಿ ದೇರಳಕಟ್ಟೆ, ಉಳ್ಳಾಲ ಚುಸಾಪ ಅಧ್ಯಕ್ಷರಾದ ಎಡ್ವರ್ಡ್ ಲೋಬೋ, ವಿದ್ಯಾರತ್ನ ಶಾಲಾ ಕಾರ್ಯದರ್ಶಿ ಸೌಮ್ಯ ಆರ್ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ನಯೀಮ್ ಹಮೀದ್, ಅಧ್ಯಾಪಕ ರವಿಕುಮಾರ್ ಕೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 


ಕವಿ ಗುಣಾಜೆ ರಾಮಚಂದ್ರ ಭಟ್ ಸ್ವಾಗತಿಸಿದರು. ಅಧ್ಯಾಪಕ ನವೀನ್ ರಾವ್ ವಂದಿಸಿದರು. ಕಾರ್ಯಕ್ರಮ ಸಂಚಾಲಕ ರವಿಕುಮಾರ್ ಕೋಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಂಭ್ರಮದ ಅಂಗವಾಗಿ ಆಯೋಜಿಸಿದ ಕನ್ನಡ ಭಾಷಣ, ಭಾವಗೀತೆ, ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಕನ್ನಡ ಗೀತಗಾಯನ ಮತ್ತು ಜಾನಪದ ನೃತ್ಯ ಕಾರ್ಯಕ್ರಮಗಳು ನಡೆಯಿತು.

web counter

0 تعليقات

إرسال تعليق

Post a Comment (0)

أحدث أقدم