ಕೋಲ್ಕತಾ: ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದ ಗಾಯಕ ಕೆ.ಕೆ ನಿಧನ ಹೊಂದಿದ್ದಾರೆ.
ಅವರನ್ನು ನಗರದ ಸಿಎಂಆರ್ ಐ ಆಸ್ಪತ್ರೆಗೆ ಕರೆತರುತ್ತಿದ್ದಾಗಲೇ ಸಾವನ್ನಪ್ಪಿದರೋದಾಗಿ ತಿಳಿದು ಬಂದಿದೆ.
ಅವರ ಅಭಿಮಾನಿಗಳಲ್ಲಿ ಕೆಕೆ ಎಂದು ಹೆಚ್ಚು ಪರಿಚಿತರಾಗಿದ್ದ ಕೃಷ್ಣಕುಮಾರ್ ಕುನ್ನಾಥ್ ಅವರು ತಮ್ಮ 53 ನೇ ವಯಸ್ಸಿನಲ್ಲಿ ನಿಧನರಾದರು.
ಮೂರು ದಶಕಗಳ ಕಾಲ ತಮ್ಮ ಸಂಗೀತ ವೃತ್ತಿಜೀವನದಲ್ಲಿ, ಕೆಕೆ ಭಾರತೀಯ ಸಂಗೀತ ಪ್ರೇಮಿಗಳಿಗೆ ಯಾರೂನ್ ದೋಸ್ತಿಯಂತಹ ಅನೇಕ ಹಿಟ್ ಗಳನ್ನು ನೀಡಿದರು.
إرسال تعليق