ಸಿರವಾರ: ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆ ಸೇರಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆಯೊಂದು ಗುರುವಾರ ತಾಲೂಕಿನ ತಿಪ್ಪಲದಿನ್ನಿ ಕ್ರಾಸ್ ಬಳಿ ಜರುಗಿದೆ.
ರಾಯಚೂರಿಗೆ ತೆರಳುತ್ತಿದ್ದ ಒಂದು ಬೈಕ್ ಹಾಗೂ ರಾಯಚೂರಿನಿಂದ ಹಟ್ಟಿಗೆ ತೆರಳುತ್ತಿದ್ದ ಮತ್ತೊಂದು ಬೈಕ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.
ಇನ್ನೊಬ್ಬ ಹುಡುಗನಿಗೆ ಗಂಭೀರ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಮೃತರನ್ನು ವಿರುಪಾಕ್ಷಿ, ಅಕ್ಕಮಹಾದೇವಿ, ವೆಂಕೋಬಾ ಸಾಗರ್ ಎಂದು ಗುರುತಿಸಲಾಗಿದೆ.
إرسال تعليق