ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೌಟುಂಬಿಕ ಕಲಹದಿಂದ ಮನನೊಂದು ಮಗಳ ಜೊತೆಗೆ ತಾಯಿ ಆತ್ಮಹತ್ಯೆ

ಕೌಟುಂಬಿಕ ಕಲಹದಿಂದ ಮನನೊಂದು ಮಗಳ ಜೊತೆಗೆ ತಾಯಿ ಆತ್ಮಹತ್ಯೆ

 


ಅಥಣಿ(ಬೆಳಗಾವಿ): ತನ್ನ ಮಗಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದಲ್ಲಿ ನಡೆದಿದೆ.


ಸವಿತಾ ಮದಗೋಂಡ ಬೆಳಗಲಿ (24) ,ಪವಿತ್ರಾ ಮದಗೋಂಡ ಬೆಳಗಲಿ (8) ಮೃತ ತಾಯಿ-ಮಗಳಾಗಿದ್ದು, ಕೌಟುಂಬಿಕ ಕಲಹಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.


ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದ ಬಳಿ ಇರುವ ತೋಟದ ಬಾವಿಗೆ ಹಾರಿ ಮಗಳು ಪವಿತ್ರಾ ಜೊತೆ ತಾಯಿ ಸವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.


ಇನ್ನು ನಾಲ್ಕು ದಿನಗಳ ಹಿಂದೆ ತಾಯಿಯ ಊರಿಗೆ ಹೋಗುವುದಾಗಿ ಹೇಳಿ ಹೋಗಿದ್ದ ಸವಿತಾಗೆ ತವರು ಮನೆಯವರು ಕಲಹವೊಂದರ ಸಂಬಂಧ ಬುದ್ಧಿವಾದ ಹೇಳಿದ್ದರಂತೆ.

ಇದರಿಂದ ಬೇಸರಗೊಂಡು ಸವಿತಾ ತನ್ನ ಮಗಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.


ವಿಷಯ ತಿಳಿದು ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0 Comments

Post a Comment

Post a Comment (0)

Previous Post Next Post