ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾಲ್ಕನೇ ಅಂತಸ್ತಿಗೆ ಚೆಂಡು ತರಲು ಹೋದ ಹಾಸ್ಟೆಲ್ ವಿದ್ಯಾರ್ಥಿ ನೆಲಕ್ಕೆ ಬಿದ್ದು ಸಾವು

ನಾಲ್ಕನೇ ಅಂತಸ್ತಿಗೆ ಚೆಂಡು ತರಲು ಹೋದ ಹಾಸ್ಟೆಲ್ ವಿದ್ಯಾರ್ಥಿ ನೆಲಕ್ಕೆ ಬಿದ್ದು ಸಾವು

 



ಮಂಗಳೂರು: ಕ್ರಿಕೆಟ್​ ಚೆಂಡು ತರಲು ಹಾಸ್ಟೆಲ್​ ಕಟ್ಟಡದ ನಾಲ್ಕನೇ ಅಂತಸ್ತಿಗೆ ಹೋದ ವಿದ್ಯಾರ್ಥಿ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಮೃತಪಟ್ಟ ಘಟನೆಯೊಂದು ನಗರದ ಕೊಟ್ಟಾರಚೌಕಿಯಲ್ಲಿ ಸಂಭವಿಸಿದೆ.


ವಿಜಯಪುರದ ಮೂಲದ ಪ್ರಣವ್​ ಎಸ್​.ಮುಂಡಾಸ್​(18) ಮೃತ ದುರ್ದೈವಿ. ಮಂಗಳೂರಿನ ಖಾಸಗಿ ರೆಸಿಡೆನ್ಶಿಯಲ್​ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದನು.


ಬುಧವಾರ ಸಂಜೆ ವಿದ್ಯಾರ್ಥಿಗಳು ಕ್ರಿಕೆಟ್​ ಆಡುತ್ತಿದ್ದಾಗ ಚೆಂಡು ಹಾಸ್ಟೆಲ್​ನ ನಾಲ್ಕನೇ ಅಂತಸ್ತಿನ ಶೀಟ್​ ಮೇಲೆ ಬಿದ್ದು ಅಲ್ಲೇ ಉಳಿದುಕೊಂಡಿತ್ತು.

ಅದನ್ನು ತರಲೆಂದು ಪ್ರಣವ್​ ಹೋದಾಗ ಶೀಟ್​ ಮುರಿದಿದೆ. ನಾಲ್ಕನೇ ಅಂತಸ್ತಿನಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಪ್ರಣವ್​ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಬದುಕಲಿಲ್ಲ.

ಕಾವೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Comments

Post a Comment

Post a Comment (0)

Previous Post Next Post