ಮಂಗಳೂರು: ಕ್ರಿಕೆಟ್ ಚೆಂಡು ತರಲು ಹಾಸ್ಟೆಲ್ ಕಟ್ಟಡದ ನಾಲ್ಕನೇ ಅಂತಸ್ತಿಗೆ ಹೋದ ವಿದ್ಯಾರ್ಥಿ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಮೃತಪಟ್ಟ ಘಟನೆಯೊಂದು ನಗರದ ಕೊಟ್ಟಾರಚೌಕಿಯಲ್ಲಿ ಸಂಭವಿಸಿದೆ.
ವಿಜಯಪುರದ ಮೂಲದ ಪ್ರಣವ್ ಎಸ್.ಮುಂಡಾಸ್(18) ಮೃತ ದುರ್ದೈವಿ. ಮಂಗಳೂರಿನ ಖಾಸಗಿ ರೆಸಿಡೆನ್ಶಿಯಲ್ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದನು.
ಬುಧವಾರ ಸಂಜೆ ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಹಾಸ್ಟೆಲ್ನ ನಾಲ್ಕನೇ ಅಂತಸ್ತಿನ ಶೀಟ್ ಮೇಲೆ ಬಿದ್ದು ಅಲ್ಲೇ ಉಳಿದುಕೊಂಡಿತ್ತು.
ಅದನ್ನು ತರಲೆಂದು ಪ್ರಣವ್ ಹೋದಾಗ ಶೀಟ್ ಮುರಿದಿದೆ. ನಾಲ್ಕನೇ ಅಂತಸ್ತಿನಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಪ್ರಣವ್ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಬದುಕಲಿಲ್ಲ.
ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق