ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬುಲ್ಡೋಜರ್ ಚಕ್ರಕ್ಕೆ ಗಾಳಿ ಹಾಕುವ ವೇಳೆ ಸ್ಫೋಟ; ಇಬ್ಬರು ಕಾರ್ಮಿಕರು ಸಾವು

ಬುಲ್ಡೋಜರ್ ಚಕ್ರಕ್ಕೆ ಗಾಳಿ ಹಾಕುವ ವೇಳೆ ಸ್ಫೋಟ; ಇಬ್ಬರು ಕಾರ್ಮಿಕರು ಸಾವು

 



ಛತ್ತೀಸ್ ಗಢದ ರಾಯಪುರ ಜಿಲ್ಲೆಯಲ್ಲಿ ಬುಲ್ಡೋಜರ್ ವಾಹನದ ಚಕ್ರಕ್ಕೆ ಗಾಳಿ ಹಾಕುವ ವೇಳೆ ಚಕ್ರ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆಯೊಂದು ರಾಯಪುರದ ಸಿಲ್ಟಾರ ಕೈಗಾರಿಕಾ ಪ್ರದೇಶದ ವರ್ಕ್ ಶಾಪ್ ವೊಂದರಲ್ಲಿ ಮೇ 3 ರಂದು ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬುಲ್ಡೋಜರ್ ನ ಬೃಹತ್ ಗಾತ್ರದ ಟೈರ್ ಗೆ ಕಾರ್ಮಿಕನೊಬ್ಬ ಗಾಳಿ ತುಂಬಿಸುತ್ತಿದ್ದು, ಮತ್ತೊಬ್ಬ ವ್ಯಕ್ತಿ ಗಾಳಿ ತುಂಬುತ್ತಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಟೈರ್ ಅನ್ನು ಹಲವು ಬಾರಿ ಒತ್ತಿದ್ದಾನೆ. ಇದರಿಂದ ಟೈರ್ ಸ್ಫೋಟಗೊಂಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಕ್ತಿಶಾಲಿಯಾಗಿ ಸ್ಫೋಟಗೊಂಡ ಪರಿಣಾಮ ಇಬ್ಬರೂ ವ್ಯಕ್ತಿಗಳ ದೇಹಗಳು ಸುಮಾರು ದೂರದವರೆಗೆ ಹಾರುತ್ತಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ.

ಈ ಇಬ್ಬರು ಕಾರ್ಮಿಕರು ಮಧ್ಯಪ್ರದೇಶದ ರೇವಾ ಜಿಲ್ಲೆಯ ನಿವಾಸಿಗಳಾಗಿದ್ದು, ಘಟನೆಗೆ ಸಂಬಂಧಿಸಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post