ಕಿನ್ನಿಗೋಳಿ: ಯುಗಪುರುಷ ಕಿನ್ನಿಗೋಳಿ ಹಾಗೂ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ವತಿಯಿಂದ ಕಿನ್ನಿಗೋಳಿ ಯುಗಪುರುಷ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕರಾವಳಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ಮೂಲವ್ಯಾಧಿ, ಚರ್ಮರೋಗ ಕ್ಷಾರ ಚಿಕಿತ್ಸಕ ಮತ್ತು ಮಿಶ್ರ ಪದ್ಧತಿ ವೈದ್ಯರಾದ ಡಾ ಸುರೇಶ ನೆಗಳಗುಳಿ ಇವರಿಗೆ ವೈದ್ಯ ಹಾಗೂ ಸಾಹಿತಿ ನೆಲೆಯಲ್ಲಿ "ಯುಗಪುರುಷ ಪ್ರಶಸ್ತಿ" ಪ್ರದಾನ ಮಾಡಲಾಯಿತು.
ಅವರು ಮಾತನಾಡುತ್ತಾ ಯುಗಪುರುಷ ಎಂಬ ಹೆಸರೇ ಆಪ್ಯಾಯಮಾನ. ಸಾಹಿತ್ಯ ಸೇವೆಯ ಜವಾಬ್ದಾರಿಯನ್ನು ಇಂತಹ ಪ್ರಶಸ್ತಿಗಳು ಹೆಚ್ಚಿಸಿವೆ. ಬೆಳದಿಂಗಳ ಸಮ್ಮೇಳನ ಖ್ಯಾತಿಯ ಡಾ ಶೇಖರ ಅಜೆಕಾರು ಅವರು ಹತ್ತು ಹಲವರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಮತ್ತು ಭುವನಾಭಿರಾಮ ಉಡುಪರ ಅವಿರತ ಸೇವೆಯನ್ನು ಕೊಂಡಾಡಿದರು.
ಪುತ್ತೂರಿನ ಶ್ರೀಮತಿ ಶಾಂತಾ ಪುತ್ತೂರು ಅವರನ್ನು ಕೂಡಾ ಶಿಕ್ಷಣ ಮತ್ತು ಸಾಹಿತ್ಯ ಸೇವೆಯ ನೆಲೆಯಲ್ಲಿ ಶಾಲು ಹಾರ ಸಹಿತವಾಗಿ ಸನ್ಮಾನಿಸಲಾಯಿತು.
ಇದೇ ವೇಳೆ ಮೂಡುಬಿದಿರೆಯ ಉದ್ಯಮಿ ಶ್ರೀಪತಿ ಭಟ್, ದಯಾಮಣಿ ಎಕ್ಕಾರು, ರಾಜೇಶ್ ಆಳ್ವ, ಡಾ ತಯಬ್ ಆಲಿ ಹೊಂಬಾಳ ಪೆರ್ಮುಂಡೆ ಶಂಕರ್ ಆರ್ ಹೆಗ್ಡೆ, ಕವತ್ತಾರು ರಾಮ ದೇವಾಡಿಗ ಸೋಮಪ್ಪ ದೇವಾಡಿಗ ಪರ್ಕಳ ಸಹಿತ ಹಲವರನ್ನು ಸಹ ಸನ್ಮಾನಿಸಲಾಯಿತು. ಹಾಗೂ ಮನೋರಂಜನಾ ಸಹಿತ ಕಾವ್ಯ ದಿಬ್ನಣ ಕಾರ್ಯಕ್ರಮಗಳೂ ಜರುಗಿದುವು. ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪರ ಅಧ್ಯಕ್ಷತೆಯ ಈ ಸಮಾರಂಭದ ಉದ್ಘಾಟನೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ನೆರವೇರಿಸಿದರು.
ಅವರು ಸಾಹಿತ್ಯವನ್ನು ಹೆಚ್ಚಿಸಬೇಕಾದರೆ ಸಾಹಿತಿಗಳನ್ನು ಗುರುತಿಸಬೇಕು ಮತ್ತು ಅವರ ಕೃತಿಗಳನ್ನು ಕೊಂಡು ಓದಬೇಕು ಎಂದರು.
ಅನಂತರ ಹರಿಕೃಷ್ಣ ಪುನರೂರು ಅವರಿಗೆ ಡಾಕ್ಟರೇಟ್ ದೊರಕಿದ ಹಿನ್ನೆಲೆಯಲ್ಲಿ ಪುರಸ್ಕರಿಸಲಾಯಿತು. ಎಂ ಆರ್ ವಾಸುದೇವ ರಾವ್ ಅವರು ಕವಿಗಳ ಕವನದ ಸೊಗಸಾದ ವಿಮರ್ಶೆಯನ್ನು ಕವಿಗೋಷ್ಠಿಯ ಅಧ್ಯಕ್ಷರ ನೆಲೆಯಲ್ಲಿ ಮಾಡಿದರು.
ಕಥಾ ಬಿಂದು ಪಿ.ವಿ ಪ್ರದೀಪ್ ಕುಮಾರ್ ಕುಂಜತ್ತ ಬೈಲ್, ದೊಡ್ಡಣ್ಣ ಶೆಟ್ಟಿ ಕವತ್ತಾರು, ಶ್ರೀಮತಿ ಪದ್ಮಶ್ರೀ ನಿಡ್ಡೋಡಿ ಸಹಿತ ಇತರ ಹಲವು ಗಣ್ಯರು ಭಾಗವಹಿಸಿದ್ದರು. ಮರವಂತೆ ಪ್ರಕಾಶ್ ಪಡಿಯಾರ್ ಉದ್ಘಾಟನಾ ಕವಿತೆ ವಾಚಿಸಿದರು. ಹಲವಾರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಮನರಂಜಿಸಿದುವು. ಡಾ ಶೇಖರ ಅಜೆಕಾರು ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ರೇಷ್ಮಾ ಗೊರೂರು ಮತ್ತು ರಾಮಕೃಷ್ಣ ಶಿರೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق