ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಸ್ಕೃತಿಕ ಸಂಭ್ರಮ

ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಸ್ಕೃತಿಕ ಸಂಭ್ರಮ


ಕಾಸರಗೋಡು: ಶ್ರೀ ಚೌಡೇಶ್ವರಿ ದೇವಸ್ಥಾನ ವಿಷ್ಣು ಮೂರ್ತಿನಗರ ಮಾನ್ಯ ಕಾಸರಗೋಡು ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ ಇವರ ನೇತೃತ್ವದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಇದರ ವತಿಯಿಂದ ಗುರುವಾರ (ಮೇ 6) ಸಂಜೆ 4.30 ರಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.


ಈ ಕಾರ್ಯಕ್ರಮದಲ್ಲಿ ಶ್ಯಾಮಲಾ ಸಂಪತ್ತಿಲ, ಅರ್ಚನಾ ಸಂಪ್ಯಾಡಿ, ಪ್ರಣಮ್ಯ ದೇವಿ, ನಂದ ಕಿಶೋರ್ ಡಿ, ನಿರೀಕ್ಷ ಶೆಟ್ಟಿ ವಿಟ್ಲ, ಸನುಷ ಎಂ, ಲಕ್ಷ್ಮಿ ನಂದ, ಸಾಂತ್ವನ, ಪ್ರಜ್ಞಾ ಪಿ ಎಸ್, ರಾಜೇಶ್, ಲಾಲಿತ್ಯ ಕುಮಾರ್ ಬೇಲೂರು, ಪ್ರಖ್ಯಾತ್ ಭಟ್, ಪುಣ್ಯ ಕೊಚ್ಚಿನ್, ವಿಜೇತ ಕಬೆಕ್ಕೊಡು ಮೊದಲಾದ ಕಲಾವಿದರು ಗಾನ ನಾಟ್ಯವನ್ನು ಪ್ರದರ್ಶಿಸಿದರು.


ಡಾ. ವಾಣಿಶ್ರೀ ಕಾಸರಗೋಡು ಇವರು ಸಮಗ್ರ ನಿರೂಪಣೆ ಮಾಡುತ್ತಾ, ಮುಂದಿನ ದಿನಗಳಲ್ಲಿ ಗಡಿನಾಡಿನ ಹಾಗೂ ಇತರ ರಾಜ್ಯದ ಎಲ್ಲಾ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟು ಅವರ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಸಹಕರಿಸುವುದು ಹಾಗೂ ರಾಜ್ಯ ಅಂತರ್ ರಾಜ್ಯ ಮಟ್ಟದಲ್ಲಿ ಮನ್ನಣೆ ಸಿಗುವಂತೆ ಮಾಡುವುದು ನಮ್ಮ ಸಂಘದ ಉದ್ದೇಶ ಎಂದು ಹೇಳಿದರು.


ಗುರುರಾಜ್ ಕಾಸರಗೋಡು ವಂದಿಸಿದರು ಸಂಘದ ಕೋಶಾಧಿಕಾರಿ ಡಾ. ವೆಂಕಟ ಗಿರೀಶ್ ಉಪಸ್ಥಿತರಿದ್ದರು.


ಭಾಗವಹಿಸಿದ ಎಲ್ಲಾ ಕಲಾವಿದರಿಗೂ ಸಂಘದ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ದೇವಸ್ಥಾನದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿದರು ಎಂದು ಡಾ. ವಾಣಿಶ್ರೀ ಕಾಸರಗೋಡು ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم