ಪುಂಜಾಲಕಟ್ಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 &2 ರ 2021 ಮತ್ತು 22ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ ಶೈಕ್ಷಣಿಕ ಕಾರ್ಯಕ್ರಮ ಮೇ 13ರಂದು ನಯನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಜರಗಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶ್ರೀಪತಿ ಭಟ್ ಇವರು ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ರಾಬಿನ್ ಸನ್ ಡಿಸೋಜ, ಸಂಸ್ಥಾಪಕರು, Cybersapiens United LLP ಇವರು ಆಗಮಿಸಿದ್ದು, ಸೈಬರ್ ಅಪರಾಧ ಜಾಗೃತಿ ಎಂಬ ವಿಷಯದ ಬಗ್ಗೆ ಮತ್ತು ಅದರ ಪರಿಣಾಮದ ಬಗ್ಗೆ ತುಂಬಾ ಸರಳವಾಗಿ ವಿಸ್ತರಿಸಿದರು.
ಈ ಕಾರ್ಯಕ್ರಮದಲ್ಲಿ ನಾರಾಯಣ ಮೂಲ್ಯ, ಸದಸ್ಯರು SDMC ಸ.ಪ್ರೌ.ಶಾಲೆ ನಯನಾಡು, ಮಹಮದ್ ಸೊಹೇಬ್, ಸಂಚಾಲಕರು ಟೀಮ್ ಆಶ್ರಯ ಮಂಗಳೂರು, ಪ್ರವೀಣ್ ಕುಮಾರ್ ಜಾರಿಗೆದಡಿ, ಅಧ್ಯಕ್ಷರು ಸತ್ಯನಾರಾಯಣ ಪೂಜಾ ಸಮಿತಿ ಹೊಸಪಟ್ನ, ಶ್ರೀಮತಿ ಸುಕನ್ಯಾ ರತ್ನ, ದೈಹಿಕ ಶಿಕ್ಷಕರು ಸ.ಪ್ರೌ.ಶಾಲೆ ನಯನಾಡು, ಹಾಗೂ ನಮ್ಮ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಆಂಜನೇಯ ಎಂ ಎನ್, ಶ್ರೀಮತಿ ನಳಿನಿ, ಶ್ರೀಮತಿ ಗಾಯತ್ರಿ, ಶ್ರೀಮತಿ ಸುಪ್ರೀತ, ಶ್ರೀಮತಿ ಪದ್ಮಶ್ರೀ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸುಕನ್ಯಾ ರತ್ನ, ದೈಹಿಕ ಶಿಕ್ಷಕ ಸ.ಪ್ರೌ.ಶಾಲೆ ನಯನಾಡು ಇವರು ಶಾಲಾ ಮಕ್ಕಳಿಗಾಗಿ ಪುಸ್ತಕ ವಿತರಣೆಯ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮವನ್ನು ಶಿಬಿರಾರ್ಥಿ ಚೈತ್ರ ಸ್ವಾಗತಿಸಿ, ಶಿಬಿರಾರ್ಥಿ ಕೃಪಾ ನಿರೂಪಿಸಿ, ಶಿಬಿರಾರ್ಥಿ ನವ್ಯ ಇವರು ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق