"ಪ್ರಮೇೂದರು ಅಂದರೆ ಕಾಂಗ್ರೆಸ್; ಕಾಂಗ್ರೆಸ್ ಅಂದರೆ ಪ್ರಮೇೂದರು "ಅನ್ನುವ ಮಟ್ಟಿಗೆ ಜನಜನಿತವಾದ ಮಾತು. ಪಕ್ಷಕ್ಕಾಗಿ ಸಾಕಷ್ಟು ತನು ಮನ ಧನ ಸವೆಸಿದಂತಹ ನಾಯಕರೂ ಹೌದು. ಅದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷದಿಂದಲೂ ಕೂಡಾ ಸಾಕಷ್ಟು ಸ್ಥಾನಮಾನ ಅಧಿಕಾರ ಅನುಭವಿಸಿದ ಸಜ್ಜನ ರಾಜಕಾರಣಿಯೂ ಹೌದು. ಬಹು ಮುಖ್ಯವಾಗಿ ಉಡುಪಿ ಜಿಲ್ಲಾ ರಾಜಕಾರಣದಲ್ಲಿ ಪ್ರಮೇಾದರ ವಚ೯ಸ್ಸು; ಪ್ರಭಾವ ಸಾಕಷ್ಟು ಇದೆ ಅನ್ನುವುದು ಕಾಂಗ್ರೆಸ್ಸಿನವರಿಗೂ ಗೊತ್ತಿದೆ. ಬಿಜೆಪಿಯವರ ಅನುಭವಕ್ಕೂ ಬಂದಿದೆ.
ಈಗ ಪ್ರಮೇೂದರು ಕೈ ತಪ್ಪಿಹೇೂಗಿರುವ ನೇೂವು ರಾಜ್ಯ, ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಖಂಡಿತವಾಗಿಯೂ ಇದೆ. ಆದರೂ ಪ್ರಮೇೂದರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಯಾಕೆ ಸಾಧ್ಯವಾಗಿಲ್ಲ ಅನ್ನುವ ಕಡೆಗೆ ಕಣ್ಣು ಹಾಯಿಸಿದಾಗ ತಿಳಿದು ಬರುವ ಅಂಶವೆಂದರೆ;
1. ಕಾಂಗ್ರೆಸ್ಸಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಬರುತ್ತಿದೆ ಅನ್ನುವ ಸತ್ಯದ ಕಥೆ ಪ್ರಮೇೂದರಿಗೂ ಗೇೂಚರಿಸಲು ಶುರುವಾಯಿತು. ಹಾಗಾಗಿ ಐವತ್ತರ ಆಸುಪಾಸಿನಲ್ಲಿರುವ ಪ್ರಮೇೂದರಿಗೆ ತಮ್ಮ ರಾಜಕೀಯ ಚಲನಾಶಕ್ತಿ ಇನ್ನಷ್ಟು ಉಳಿಸಿ ಬೆಳಸಿ ಕೊಳ್ಳಲೇ ಬೇಕಾದ ಕಾರಣ ಒಂದು ದೃಢ ನಿರ್ಧಾರಕ್ಕೆ ಪ್ರಮೇೂದರು ಬರಲೇ ಬೇಕಾದ ಅನಿವಾರ್ಯತೆ ಬಂತು ಅನ್ನುವುದು ಎಲ್ಲರ ಅಭಿಪ್ರಾಯವೂ ಹೌದು.
2. ಬಿಜೆಪಿ ಸೇರಬೇಕೋ ಬೇಡವೊ ಅನ್ನುವ ದ್ವಂದ್ವ ನಿಲುವು ಪ್ರಮೇೂದರಿಗೆ ಕಾಡಲು ಶುರುವಾಗಿದ್ದು 2019 ರ ಲೇೂಕ ಸಭಾ ಚುನಾವಣಾ ಕಾಲದಲ್ಲಿ. ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಪ್ರಮೇೂದರಿಗೆ ಜೆಡಿಎಸ್ ನ ಹಸಿರು ಶಾಲು ಹೇೂದಿಸಿ ಚುನಾವಣಾ ಕಣಕ್ಕೆ ನೂಕಿದರಲ್ಲ, ಇದು ಮತ್ತೆ ಪ್ರಮೇೂದರಿಗೆ ಕಾಂಗ್ರೆಸ್ ನಲ್ಲಿ ಉಸಿರು ಕಟ್ಟಿಸಿದ ಪರಿಸ್ಥಿತಿ ನಿಮಾ೯ಣ ಮಾಡಿದಂತೂ ಸತ್ಯ.
3. ಸುಮಾರು ಒಂದು ವಷ೯ಗಳ ಕಾಲ ಪ್ರಮೇೂದರು ಕಾಂಗ್ರೆಸ್ ಗೂ ಬರಲಾರದೆ, ಅತ್ತ ಜೆಡಿಎಸ್ ನಲ್ಲೂ ಉಳಿಯಲಾರದ ತ್ರಿಶಂಕು ಸ್ಥಿತಿ ಪ್ರಮೇೂದರ ಮನಸ್ಸನ್ನು ಸಾಕಷ್ಟು ಘಾಸಿಗೊಳಿಸಿರುವುದಂತೂ ನಿಜ. ಈ ಮಧ್ಯದಲ್ಲಿಯೇ ಪ್ರಮೇೂದರನ್ನು ಬದಿಗೆ ಸರಿಸಿ ಚಲಾವಣೆಯಲ್ಲಿ ಇಲ್ಲದ ಕೆಲವೊಂದು ನಾಯಕರುಗಳು ಉಡುಪಿಯಲ್ಲಿ ತಮ್ಮ ಅಸ್ತಿತ್ವ ಜಾಹೀರು ಪಡಿಸಲು ಮುಂದಾದರು .ಇದನ್ನು ಕೂಡಾ ಪ್ರಮೇೂದರು ದೂರದಿಂದಲೆ ಕಂಡು ಉಡುಪಿಯಲ್ಲಿ ಕಾಂಗ್ರೆಸ್ಸಿನ ಸ್ಥಿತಿ ಗತಿ ಬಗ್ಗೆ ಚೆನ್ನಾಗಿ ಅರಿತಿದ್ದಾರೆ.
4. ಪ್ರಮೇೂದರು ಇಂದಲ್ಲ ನಾಳೆ ಕಾಂಗ್ರೆಸ್ ಗೆ ಗುಡ್ ಬೈ ಹೇಳುತ್ತಾರೆ ಅನ್ನುವ ನಿಧಾ೯ರಕ್ಕೆ ಪ್ರಮೇೂದರ ಪರಮ ಭಕ್ತರಿಗೆ ಮೊದಲೇ ವಾಸನೆ ಹೊಡೆದಿತ್ತು. ಹಾಗಾಗಿ ಅವರಲ್ಲೆಲ್ಲರೂ ಪ್ರಮೇೂದರಿಗಿಂತ ಒಂದು ವರುಷದ ಮೊದಲೇ ಹಾಸಿಗೆ ಬದಲಾಯಿಸಿಬಿಟ್ಟಿದ್ದರು.
ಈ ಅಥ೯ದಲ್ಲಿ ಪ್ರಮೇೂದರು ಹೆಚ್ಚು ಸೇಫ್.
ಹಾಗಾದರೆ ಬಿಜೆಪಿಯಲ್ಲಿ ಪ್ರಮೇೂದರ ಪಾತ್ರ- ಗಾತ್ರ- ಸೂತ್ರವೇನು ಅನ್ನುವುದು ಕಾಂಗ್ರೆಸಿರಿಗಿಂತಲೂ ಬಿಜೆಪಿ ಗರಿಗೆ ಕಾಡುವ ಅತಿ ದೊಡ್ಡ ಪ್ರಶ್ನೆ. ಕೆಲವರಿಗಂತೂ ನಿದ್ರೆ ಬಾರದ ರಾತ್ರಿಗಳೇ ಜಾಸ್ತಿಯಾಗುವ ಕಾಲ ಬಂದಿದೆ ಅನ್ನುವುದು ಅಷ್ಟೇ ಸತ್ಯ.
1 .ಕೆಲವರು ತಿಳಿದು ಕೊಂಡಿರ ಬಹುದು ಜೆ.ಪಿ.ಹೆಗ್ಡೆ ಅವರನ್ನು ಬಿಜೆಪಿ ನಡೆಸಿಕೊಂಡ ರೀತಿಯಲ್ಲಿಯೇ "ಆಡಿಸಿ ನೇೂಡು ಉರುಳಿಸಿ ನೇೂಡು" ಪರಿಸ್ಥಿತಿ ಪ್ರಮೇೂದರಿಗೂ ಬರ ಬಹುದು ಅನ್ನುವ ಲೆಕ್ಕಾಚಾರದಲ್ಲಿ ಇರ ಬಹುದು. ಆದರೆ ಪ್ರಮೇೂದರ ಸಂದರ್ಭದಲ್ಲಿ ಇದು ಖಂಡಿತವಾಗಿಯೂ ಸಾಧ್ಯವಿಲ್ಲ.
2. ಐವತ್ತರ ಆಸುಪಾಸಿನ ಪ್ರಭಾವಿ ಮೊಗವೀರ ಸಮುದಾಯದ ನಾಯಕನನ್ನು ಮತಗಳಿಕೆಯ ಅಸ್ತೃವಾಗಿ ಬಳಸಿಕೊಳ್ಳಲೇ ಬೇಕಾದ ಅಗತ್ಯ ಬಿಜೆಪಿಗೆ ಇದೆ.
3. ಉಡುಪಿಯಲ್ಲಿ ಶಾಸಕ ಕೆ.ರಘಪತಿ ಭಟ್ಟರ ಗೆಲುವಿಗೆ ಪೂರಕ ಶಕ್ತಿ ಒದಗಿಸ ಬಲ್ಲ ತರಗತಿಯ ಸಹಪಾಠಿ ಸಿಕ್ಕಿದ ಅನ್ನುವ ಸಂತಸ ಒಂದೆಡೆ ಆದರೆ, ಪ್ರಮೇೂದರಿಗೂ ತಕ್ಕ ಸ್ಠಾನ ಮಾನ ಗೌರವ ನೀಡಬೇಕಾದ ಅನಿವಾರ್ಯತೆ ರಘಪತಿ ಭಟ್ಟರಿಗೂ ಇದೆ.ಇದಕ್ಕೆ ಪಕ್ಷದ ರಾಜ್ಯ /ರಾಷ್ಟ್ರ ನಾಯಕರು ದಾರಿ ತೇೂರಿಸಲೇ ಬೇಕು. ಇಲ್ಲವಾದರೆ ಪರಿಸ್ಥಿತಿ ನೆಟ್ಟಗೆ ಇರಲಾರದು ಅನ್ನುವುದು ಅಷ್ಟೇ ವಾಸ್ತವಿಕ.
4. ಹಾಗಾದರೆ ಬಿಜೆಪಿ ಪ್ರಮೇಾದರನ್ನು ಎಲ್ಲಿ ಯಾವಾಗ ಅಸ್ತ್ರವಾಗಿ ಬಳಸಿಕೊಳ್ಳಬಹುದು?
* ಉಡುಪಿ ಯಲ್ಲಂತೂ ಪ್ರಮೇೂದರಿಗೆ ಜಾಗ ಖಂಡಿತವಾಗಿಯೂ ಸದ್ಯಕ್ಕೆ ಖಾಲಿ ಇಲ್ಲ. ಆದರೆ ಕಾಪು ಕ್ಷೇತ್ರದಲ್ಲಿ ಲಾಲಾಜಿ ಅವರಿಗೆ ಸಾಕಪ್ಪಾ ಈ ಚುನಾವಣೆ ಅನ್ನಿಸಿದರೆ ಬಿಜೆಪಿಗೆ ಪ್ರಮೇೂದರ ಆಯ್ಕೆ ಹೆಚ್ಚು ಜಾಣತನದ ನಡಿಗೆ ಅನ್ನಿಸಬಹುದು. ಕಾರಣ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಮೊಗ ವೀರ ಸಮಾಜಕ್ಕೆ ಬಿಜೆಪಿ ಮಣೆ ಹಾಕಿದೆ ಅನ್ನುವ ಮತ ಬ್ಯಾಂಕ್ ಲೆಕ್ಕಾಚಾರ ಹೆಚ್ಚು ಲಾಭ ತರಬಹುದು.
* ಕಾಪುವಿನಲ್ಲಿ ಇದಾಗಲೇ ಮೊಗವೀರ ಸಮಾಜದವರೇ ಶಾಸಕರಾಗಿ ಇರುವಾಗ ಅದನ್ನು ತೆಗೆದು ಬೇರೆ ಜಾತಿಯರಿಗೆ ಕೊಟ್ಟು ಬಿಟ್ಟರೆ ಜಿಲ್ಲೆಯಲ್ಲಿ ಮೂರನೆ ಸಂಖ್ಯೆಯಲ್ಲಿರುವ ಮತದಾರರು ಬೇರೆ ಕ್ಷೇತ್ರದಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ.
* ಇದೇ ಕಾಪು ಕ್ಷೇತ್ರದಲ್ಲಿ ಬಂಟ ಸಮಾಜದ ಸಮಥ೯ ಅಭ್ಯರ್ಥಿ ಹಾಗೂ ಸಾಹಿತ್ಯ ಹೃದಯದ ಬಿಜೆಪಿ ನಾಯಕರು ಕೂಡಾ ಆಕಾಂಕ್ಷಿಮಾತ್ರವಲ್ಲ ಗೆಲ್ಲ ಬಲ್ಲ ತಾಕ್ಕತ್ತು ಇದೆ ಅನ್ನುವುದನ್ನು ಕೇಳಿದ್ದೇನೆ.ಆದರೆ ಪ್ರಸ್ತುತ ಅವರಿಗಿರುವ ಒಂದೇ ತೊಡಕೆಂದರೆ ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರದಲ್ಲಿ ಮೂವರು ಬಂಟರಿಗೆ ಸೀಟು ಕೊಡಲು ಬಿಜೆಪಿ ಮನಸ್ಸು ಮಾಡಬಹುದೇ? ಇದು ಸಾದ್ಯವಿಲ್ಲ.
* ಉಡುಪಿ ಜಿಲ್ಲೆಯಲ್ಲಿ ಬಿಜೆಪಿಗೆ ಗೆಲುವು ದೊಡ್ಡ ಸವಾಲಿನ ಕ್ಷೇತ್ರವೆಂದರೆ ಅದು ಕಾಪು ಅನ್ನುವುದು ಅಷ್ಟೇ ಸತ್ಯ. ಅದಕ್ಕೆ ಮುಖ್ಯಕಾರಣ ಸೊರಕೆ ಅಂತಹ ನಾಯಕರು ಸೇೂತನಂರವೂ ಖಾಯಂ ಆಗಿ ಕಾಪುವಿನಲ್ಲಿ ಠಿಕಾಣಿ ಹೂಡಿಕೂತಿರುವ ಕಾರಣ. ಹಾಗಾಗಿ ಬಿಜೆಪಿಗೆ ಇಲ್ಲಿ ಸಮಥ೯ ಆಭ್ಯಥಿ೯ಯನ್ನು ನಿಲ್ಲಿಸಲೇ ಬೇಕಾದ ಅಗತ್ಯವಿದೆ.
* ಇನ್ನು ಒಂದು ಸಾಧ್ಯತೆ ಇದೆ.ಕುಂದಾಪುರಕ್ಕೆ ಪ್ರಮೇೂದ ಮಧ್ವ ರಾಜರನ್ನೆ ಬ್ರಹ್ಮಾಸ್ತ್ರವಾಗಿ ಪ್ರಯೇೂಗ ಮಾಡಿ"ಕುಂದಾಪುರದ ವಾಜಪೇಯಿ " ಹಾಲಾಡಿ ಅವರಿಗೆ ಬಿಜೆಪಿಯ ಪಕ್ಷ ಸಿದ್ಧಾಂತ. ನಾಯಕತ್ವದ ವಿಧೇಯತೆಯ ಬಗ್ಗೆ ಪಾಠ ಕಲಿಸಿರೆ ಹೇಗೆ ಅನ್ನುವ ದೂರ (ರಾ)ಆಲೇೂಚನೆ ಬಿಜೆಪಿಯ ವರಿ(ಶಿ)ಷ್ಠರಿಗೆ ಬಂದು ಬಿಟ್ಟರೆ..? ಇದು ರಾಜಕೀಯ ನೇೂಡಿ, ಏನು ಬೇಕಾದರೂ ಆಗಬಹುದು.
* ಅಂತೂ ಪ್ರಮೇೂದರ ರಾಜಕೀಯ ನಡೆ ಬಿಜೆಪಿಯ ಕಡೆ. ಉಡುಪಿ ಜಿಲ್ಲೆಯಲ್ಲಿ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವುದು ನೂರಕ್ಕೆ ನೂರು ಸತ್ಯ.
-ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق