ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬದುಕಿನಲ್ಲಿ ಆಚಾರವಂತರಾಗುವುದು ಬಹುಮುಖ್ಯ: ಡಿ. ಹರ್ಷೇಂದ್ರ ಕುಮಾರ್

ಬದುಕಿನಲ್ಲಿ ಆಚಾರವಂತರಾಗುವುದು ಬಹುಮುಖ್ಯ: ಡಿ. ಹರ್ಷೇಂದ್ರ ಕುಮಾರ್

ರುಡ್‌ಸೆಟ್‌- ಮೊಬೈಲ್ ರಿಪೇರಿ, ಮೋಟಾರ್ ರೀವೈಂಡಿಂಗ್ ತರಬೇತಿ ಸಮಾರೋಪ



ಉಜಿರೆ: ಜೀವನದಲ್ಲಿ ಬರುವ ಸಮಸ್ಯೆಗಳು ವ್ಯಕ್ತಿಯನ್ನು ಸಕ್ರಿಯವಾಗಿರಿಸುತ್ತವೆ. ಸಮಾಜದಿಂದ ಮತ್ತು ಸಂಸ್ಥೆಯಿಂದ ಏನನ್ನು ಪಡೆದಿರುವಿರೊ ಅದನ್ನು ಹಿಂದಿರುಗಿಸುವ ಕಾರ್ಯವನ್ನು ಇಲ್ಲಿಂದ ತೆರಳಿದ ಕೂಡಲೇ ಆರಂಭಿಸಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರು ಕಿವಿಮಾತು ನೀಡಿದರು.


ಅವರು ರುಡ್‍ಸೆಟ್ ಸಂಸ್ಥೆ ಉಜಿರೆಯಲ್ಲಿ ನಡೆದ ಮೊಬೈಲ್ ರಿಪೇರಿ ಮತ್ತು ಇಲೆಕ್ಟ್ರಿಕ್ ಮೋಟಾರ್ ರಿವೈಂಡಿಂಗ್ ಈ ಎರಡೂ ತರಬೇತಿಗಳ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಬಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.


ಹೆತ್ತವರನ್ನು ಗೌರವಿಸಿ ಅವರು ನೀಡಿದ ಸಂಸ್ಕಾರವನ್ನು ಅನುಸರಿಸಿ ಮುನ್ನಡೆಯುವವನು ಒಬ್ಬ ಒಳ್ಳೆಯ ನಾಗರಿಕನಾಗುತ್ತಾನೆ. ಈ ಸಂಸ್ಥೆ ನೀಡಿರುವ ವಿದ್ಯೆ ನಿಮ್ಮನ್ನು ವಿಚಾರವಂತರನ್ನಾಗಿಸಿದೆ, ಆದರೆ ಆಚಾರವಂತರಾಗುವಲ್ಲಿ ನಿಮ್ಮ ಪ್ರಾಮಾಣಿಕ ಪ್ರಯತ್ನ ಅತೀ ಮುಖ್ಯ ಎಂದು ಕಿವಿ ಮಾತು ಹೇಳಿದರು.


ಅತಿ ಕಿರಿಯ ವಯಸ್ಸಿನಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನಾಲ್ಕು ದಶಕಗಳ ಹಿಂದೆ ಆರಂಭಿಸಿದ ಈ ಸಂಸ್ಥೆ ಇಂದು ದೇಶವ್ಯಾಪಿ ಕಾರ್ಯ ನಿರ್ವಹಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.


ಈ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರಿಧರ ಕಲ್ಲಾಪುರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿರ್ದೇಶಕರಾದ ಎಂ. ಸುರೇಶ್ ರವರು ಸ್ವಾಗತಿಸಿ ತರಬೇತಿಯ ಹಿನ್ನೋಟವನ್ನು ನೀಡಿದರು. ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರ್ವಹಿಸಿ, ಹಿರಿಯ ಉಪನ್ಯಾಸಕರಾದ ಶ್ರೀಮತಿ ಅನಸೂಯರವರು ಧನ್ಯವಾದವಿತ್ತರು. ಎರಡೂ ತರಬೇತಿಯಲ್ಲಿ ಒಟ್ಟು 70 ಶಿಬಿರಾರ್ಥಿಗಳು ಭಾಗವಹಿಸಿ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ನಡೆಯುತ್ತಿರುವ ಮೆನ್ಸ್ ಪಾರ್ಲರ್ ಮ್ಯಾನೇಜ್‍ಮೆಂಟ್ ತರಬೇತಿ ಮತ್ತು ಆರ್ಥಿಕ ಸಾಕ್ಷರತಾ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ತರಬೇತಿಯ ಓಟ್ಟು 56 ಶಿಬಿರಾರ್ಥಿಗಳು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم