ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಧರು ರಕ್ತದಾನ ಮಾಡುವುದರೊಂದಿಗೆ ವಿಶ್ವ ರೆಡ್‌ಕ್ರಾಸ್ ದಿನಾಚರಣೆ

ಅಂಧರು ರಕ್ತದಾನ ಮಾಡುವುದರೊಂದಿಗೆ ವಿಶ್ವ ರೆಡ್‌ಕ್ರಾಸ್ ದಿನಾಚರಣೆ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಘಟಕದ ವತಿಯಿಂದ ವಿಶ್ವ ರೆಡ್‌ಕ್ರಾಸ್ ದಿನಾಚರಣೆಯನ್ನು ಅಂಧರು ರಕ್ತದಾನ ಮಾಡುವ ಮೂಲಕ ನಡೆಸಲಾಯಿತು.


ನಗರದ ಲೇಡಿಗೋಷನ್ ಆಸ್ಪತ್ರೆಯ ಆವರಣದಲ್ಲಿ ಶ್ರೀ ಶಾರದ ಅಂಧರ ಗೀತ ಗಾಯನ ಕಲಾಸಂಘದ ಕಾರ್ಯದರ್ಶಿ ಕಾರ್ಯಕ್ರಮ ಮಂಜುನಾಥ ಉದ್ಘಾಟಿಸಿದರು.


ಬಳಿಕ ಅವರು ಮಾತನಾಡಿ, ನನ್ನ ರಕ್ತ ಮತ್ತು ದೀಪವನ್ನು ನೋಡುವ ಭಾಗ್ಯ ನನಗಿಲ್ಲದಿದ್ದರೂ, ನನ್ನ ಹೃದಯದಿಂದ ದೀಪ ಬೆಳಗಿಸಿದ್ದೇನೆ. ನಮ್ಮ ಸಂಘದ ಎಲ್ಲರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುತ್ತೇವೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರೆಡ್‌ಕ್ರಾಸ್ ಘಟಕದ ಚೇಯರ್‌ಮೆನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ವಿಶ್ವದಾದ್ಯಂತ ಇಂದು ರೆಡ್‌ಕ್ರಾಸ್ ದಿನಾಚರಣೆಯನ್ನು ಆಯೋಜಿಸಲಾಗಿದ್ದು, ದ. ಕ. ಜಿಲ್ಲಾ ಘಟಕವು ಅಂಧರು ರಕ್ತದಾನ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ನಡೆಸಲಾಗಿದೆ. ಇದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಲಿದೆ ಎಂದರು.


ಮುಖ್ಯ ಅತಿಥಿಯಾಗಿ ಡಾ. ಅರವಿಂದ, ಡಾ. ಕೆ. ಆರ್ ಕಾಮತ್, ಡಾ. ಸತೀಶ್ ರಾವ್, ರೆಡ್‌ಕ್ರಾಸ್ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ, ಗೌರವ ಸಲಹೆಗಾರ ಪ್ರಭಾಕರ ಶರ್ಮಾ, ಪ್ರವೀಣ್ ಉಪಸ್ಥಿತರಿದ್ದರು. ರೆಡ್‌ಕ್ರಾಸ್ ಗೌರವ ಕಾರ್ಯದರ್ಶಿ ಕುಸುಮಾಧರ್  ಕಾರ್ಯಕ್ರಮ ನಿರೂಪಿಸಿದರು.


ಇದೇ ಸಂದರ್ಭ ಅಂಧರಿಗೆ ಅಗತ್ಯ ಆಹಾರ ಕಿಟ್‌ಗಳನ್ನು ರೆಡ್‌ಕ್ರಾಸ್‌ನಿಂದ ವಿತರಿಸಲಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم