ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳದಲ್ಲಿ ಜೀವ ರಕ್ಷಣಾ ಕೌಶಲ ತರಬೇತಿ

ಧರ್ಮಸ್ಥಳದಲ್ಲಿ ಜೀವ ರಕ್ಷಣಾ ಕೌಶಲ ತರಬೇತಿ


ಧರ್ಮಸ್ಥಳದಲ್ಲಿ ಭಾನುವಾರ ಜೀವ ರಕ್ಷಣಾ ಕೌಶಲ ತರಬೇತಿ ಶಿಬಿರವನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.


ಉಜಿರೆ: ಉತ್ತಮ ತರಬೇತಿ, ಸತತ ಅಭ್ಯಾಸ, ನಿರಂತರ ಪ್ರಯತ್ನ ಮತ್ತು ಅನುಭವದಿಂದ ಜೀವ ರಕ್ಷಣಾ ಕೌಶಲ ಬೆಳೆಸಿಕೊಳ್ಳಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.


ಅವರು ಭಾನುವಾರ ಧರ್ಮಸ್ಥಳದಲ್ಲಿ “ಶೌರ್ಯ ವಿಪತ್ತು ನಿರ್ವಹಣಾ ಸಂಯೋಜಕರು ಮತ್ತು ಸ್ವಯಂ-ಸೇವಕರಿಗೆ” ಆಯೋಜಿಸಿದ ಜೀವ ರಕ್ಷಣಾ ಕೌಶಲ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಪ್ರಾಕೃತಿಕ ವಿಕೋಪ, ಸಾಂಸಾರಿಕ ವಿಪತ್ತು, ಅಪಘಾತ ಮತ್ತು ಆಪತ್ತು ಉಂಟಾದಾಗ ಶೌರ್ಯ ತಂಡದ ಸದಸ್ಯರು ಮಾನವೀಯತೆಯಿಂದ ಸಂತ್ರಸ್ತರ ಸೇವೆಗೆ ಧಾವಿಸುತ್ತಾರೆ. ಇವರು ದೇವದೂತರಾಗಿ ಸಕಾಲದಲ್ಲಿ ಸೇವೆ ಮಾಡಲು ಬೇಕಾದ ತರಬೇತಿ ಹಾಗೂ ವಿಪತ್ತು ನಿರ್ವಹಣಾ ಪರಿಕರಗಳನ್ನು ಈಗಾಗಲೆ ಒದಗಿಸಲಾಗಿದೆ. ರಾಜ್ಯದಲ್ಲಿ 11 ಜಿಲ್ಲೆಗಳ 50 ತಾಲ್ಲೂಕುಗಳಲ್ಲಿ 4,056 ಮಂದಿ ತರಬೇತಿ ಹೊಂದಿದ ಸ್ವಯಂ-ಸೇವಕರು ಸೇವೆಗೆ ಸಿದ್ಧವಾಗಿದ್ದಾರೆ. ಇನ್ನೂ 10,000 ಸ್ವಯಂ-ಸೇವಕರ ನೋಂದಾವಣಿ ಮಾಡಲಾಗುವುದು.


ಅಧಿಕೃತವಾಗಿ ಈ ಸೇವಾ ಕಾರ್ಯವನ್ನು ಉದ್ಘಾಟಿಸಲು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ಆಹ್ವಾನಿಸಲಾಗಿದೆ ಎಂದು ಹೆಗ್ಗಡೆಯವರು ತಿಳಿಸಿದರು.


ಉಷಾ ಬೆಂಕಿ ರಕ್ಷಣಾ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಜಗದೀಶ ಅಡಪ ಮಾತನಾಡಿ ಸಾಮಾನ್ಯಜ್ಞಾನ, ಕ್ಷಿಪ್ರ ನಿರ್ಧಾರ ಮತ್ತು ತಜ್ಞ ಅನುಭವದಿಂದ ಯಾವುದೇ ವಿಪತ್ತು ಉಂಟಾದಾಗ ಪ್ರಾಣ ರಕ್ಷಣೆಯೊಂದಿಗೆ ಹೆಚ್ಚಿನ ಅಪಾಯವನ್ನು ತಡೆಗಟ್ಟಬಹುದು ಎಂದು ಹೇಳಿದರು.


ಶಿಬಿರಾರ್ಥಿಗಳಿಗೆ ಅವರು ಉಪನ್ಯಾಸ, ಪ್ರಾತ್ಯಕ್ಷಿಕೆ ಮತ್ತು ಪ್ರಶ್ನೋತ್ತರ ಮೂಲಕ ವಿಶೇಷ ತರಬೇತಿ ನೀಡಿದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮತ್ತು ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು.


ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾೈಸ್ ಸ್ವಾಗತಿಸಿದರು. ಯೋಜನಾಧಿಕಾರಿ ಜೈವಂತ್ ಪಟಗಾರ್ ಧನ್ಯವಾದವಿತ್ತರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم