ಬೆಂಗಳೂರು ನಗರದ ನಿರ್ಮಲ ಸ್ಟೋರ್ಸ್ ಬಳಿ ಹಾಗೂ ಹನುಮಂತ ನಗರ ವ್ಯಾಪ್ತಿಗೆ ಬರುವ ಆಕ್ಸಿಸ್ ಬ್ಯಾಂಕ್ ನ ಎಟಿಎಂ ನಲ್ಲಿ 2 ಗಂಟೆಗಳ ಸಮಯ ವ್ಯರ್ಥವಾಗಿತ್ತು.
ಮೇ 14ರ ಅಪರಾಹ್ನ ಸುಮಾರು 4.30ರ ಸಮಯ "Axis Bank ಆಕ್ಸಿಸ್ ಬ್ಯಾಂಕ್‌ನ ಎಟಿಎಂನ ದುರಂತ ಕಥೆ" ಆರಂಭವಾಗಿತ್ತು.
ಎಟಿಎಂನ ಮುಂಭಾಗದಲ್ಲಿ ಇರುವ ಬಸ್ ಬುಕಿಂಗ್ ಕೌಂಟರ್ ನಲ್ಲಿ ಪ್ರಯಾಣ ಮಾಡಲು ಟಿಕೆಟ್ ತೆಗೆದು ಕೊಂಡು ಬಂದು ಆಕ್ಸಿಸ್ ಬ್ಯಾಂಕ್ ನ ಎಟಿಎಂನಲ್ಲಿ ಹಣ ಡ್ರಾ ಮಾಡಲು ನನ್ನ ಎಟಿಎಂ ಕಾರ್ಡ್ ಅನ್ನು ಎಟಿಎಂ ಮೆಷಿನ್ ನಲ್ಲಿ ಹಾಕಿದ್ದೆ ಹಣವೂ ಬರಲಿಲ್ಲ, ಕಾರ್ಡ್ ಸಹ ಬರಲಿಲ್ಲ.
ಅಲ್ಲಿ ಬ್ಯಾಂಕ್ ನ ಎಟಿಎಂ ನಿರ್ವಹಣೆ ಮಾಡುವ ಸಿಬ್ಬಂದಿ ವರ್ಗದವರು ಇರಲಿಲ್ಲ. ಅಲ್ಲಿ ಒಬ್ಬ ಗಾರ್ಡ್ ಸಹ ಇರಲಿಲ್ಲ. ಆದರೆ ಜೊತೆ ಎಟಿಎಂನ ಕೌಂಟರ್ ಒಳಗೆ ಗಬ್ಬು ನಾರುತ್ತಾ ಇದ್ದರೆ ಮತ್ತೊಂದೆಡೆ ಸ್ವಚ್ಚತೆ ಎಂಬುದು ಮರೀಚಿಕೆ ಆಗಿತ್ತು.
ಎಟಿಎಂ ಸರಿ ಇಲ್ಲದೆ ಇದ್ದರೆ ಸರಿ ಇಲ್ಲ ಎಂಬ ನಾಮ ಫಲಕ ಸಹ ಹಾಕಿರಲಿಲ್ಲ. ಅಕ್ಕಪಕ್ಕದಲ್ಲಿ ಇರುವ ಅಂಗಡಿಯಲ್ಲಿ ಕೇಳಿದರೆ, ಹೆಸರು ಹೇಳಲು ಇಚ್ಛಿಸದೆ, ಯಾವಾಗಲೂ ಇದೇ ಗೋಳು ಎಂದು ಹೇಳಿ ಹೊರಟಿದ್ದರು.
ಆದರೆ ನನ್ನ ಕಾರ್ಡ್‌ಗಾಗಿ ನನ್ನ ಹೋರಾಟ ಮಾತ್ರ ಮುಂದುವರೆದಿತ್ತು. ನನಗೆ ಹಣದ ತುರ್ತು ಅವಶ್ಯಕತೆ ಇತ್ತು. ಪ್ರಯಾಣ ಮಾಡಲು ಸಮಯವೂ ಕಡಿಮೆ ಇತ್ತು.
ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯವಿಲ್ಲದೆ ಇರುವ ಆಕ್ಸಿಸ್ ಬ್ಯಾಂಕ್ ನ ಎಟಿಎಂ ಅನ್ನು ಮುಚ್ಚುವ ಮನಸ್ದು ಮಾಡಿ ನಾಗರೀಕರ ನೆಮ್ಮದ್ಧಿ ನೀಡಲಿ.
ಚಿತ್ರ : ಬರಹ : ತೀರ್ಥಹಳ್ಳಿ ಅನಂತ ಕಲ್ಲಾಪುರ , ಬೆಂಗಳೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق