ಬೆಂಗಳೂರು: ಬೆಳಗಾವಿಯ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ನಡೆದ ಬಸವದರ್ಶನ ಪ್ರವಚನ ಮಂಗಲ ಸಮಾರಂಭದಲ್ಲಿ ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಪ್ರಕಟಿಸಿರುವ ಸಂಸ್ಕೃತಿ ಚಿಂತಕ ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರ ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಮಹತ್ವ ಸಾರುವ ವಿಶೇಷ ಹೊತ್ತಗೆ 'ವಂದೇ ಗುರುಪರಂಪರಾಮ್' ಹಾಗೂ ಸದ್ವಿಚಾರಗಳ ಅಂಕಣ ಬರಹ ಸಂಕಲನ ' ಸತ್ಸಂಗ ಸಂಪದ' ಕೃತಿಗಳನ್ನು ವೇದಿಕೆ ಮೇಲೆ ಉಪಸ್ಥಿತರಿದ್ದ ಡಂಬಳ ಗದಗ ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಸಹಿತ ಗಣ್ಯರಿಗೆ ನೀಡಲಾಯಿತು.
ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ, ಅಲ್ಲಮಪ್ರಭು ಸ್ವಾಮಿಗಳು, ಅಥಣಿ ಮೋಟಗಿ ಮಠದ ಪ್ರಭು ಚೆನ್ನ ಮಹಾಸ್ವಾಮಿಗಳು, ಮಮ್ಮಿಗಟ್ಟಿ ಡಾ. ಬಸವಾನಂದ ಸ್ವಾಮಿಗಳು, ವಾಗ್ದೇವಿ ತಾಯಿ, ಕುಮುದಿನಿ ತಾಯಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಎಸ್ಎಂ ಜಾಮದಾರ ಅವರಿಗೂ ಕೃತಿಗಳನ್ನು ನೀಡಲಾಯಿತು.
ವೇದಿಕೆಯಲ್ಲಿ ಕರವೇ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಪುಸ್ತಕ ಪ್ರಚಾರ ಸಮಿತಿ ಅಧ್ಯಕ್ಷ ರಾಜು ನಾಶಿಪುಡಿ ಮತ್ತು ಸಂಚಾಲಕರಾದ ಯಮಕನಮರಡಿಯ ಸೋಮಶೇಖರ ಹೊರಕೇರಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق