ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೃತ ಬಾಲಕಿಯರ ಕುಟುಂಬಕ್ಕೆ ಶಾಸಕ ಹರ್ಷವರ್ಧನ್ ಸಾಂತ್ವನ, ನೆರವು

ಮೃತ ಬಾಲಕಿಯರ ಕುಟುಂಬಕ್ಕೆ ಶಾಸಕ ಹರ್ಷವರ್ಧನ್ ಸಾಂತ್ವನ, ನೆರವು

ನಂಜನಗೂಡು: ಕಣ್ಣಾಮುಚ್ಚಾಲೆ ಆಡುವಾಗ ಐಸ್ ಕ್ರೀಂ ಬಾಕ್ಸ್ ನಲ್ಲಿ ಬಚ್ಚಿಟ್ಟುಕೊಳ್ಳಲು ಹೋದ ಬಾಲಕಿಯರಿಬ್ಬರು ದಾರುಣವಾಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ಶಾಸಕ ಬಿ.ಹರ್ಷವರ್ಧನ್ ಅವರು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ,  ಬಾಲಕಿಯರ ಪಾಲಕರಿಗೆ ಸಾಂತ್ವನ ಹೇಳಿದ್ದಲ್ಲದೆ, ಆರ್ಥಿಕ ನೆರವನ್ನೂ ನೀಡಿದರು.


ತಾಲೂಕಿನ ಮಸಗೆ ಗ್ರಾಮದಲ್ಲಿ ಬುಧವಾರ ಘಟನೆ ನಡೆದಿತ್ತು. ಗ್ರಾಮದ ನಾಗರಾಜ ನಾಯ್ಕ ಮತ್ತು ಚಿಕ್ಕದೇವಮ್ಮ ದಂಪತಿಯ ಪುತ್ರಿ 12 ವರ್ಷದ ಭಾಗ್ಯ ಮತ್ತು ರಾಜಾ ನಾಯ್ಕ್ ಹಾಗೂ ಗೌರಮ್ಮ ದಂಪತಿಯ ಪುತ್ರಿ ಕಾವ್ಯ (7) ಎನ್ನುವವರು ಆಟವಾಡುವಾಗ ಮನೆಯ ಎದುರು ಇಡಲಾಗಿದ್ದ ಖಾಲಿ ಐಸ್‌ ಕ್ರೀಂ ಬಾಕ್ಸ್ ನಲ್ಲಿ ಬಚ್ಚಿಟ್ಟುಕೊಂಡಿದ್ದರು. ಆದರೆ ಬಾಕ್ಸ್ ಆಕಸ್ಮಿಕವಾಗಿ ಬಾಗಿಲು ಮುಚ್ಚಿಕೊಂಡಿದೆ. ಬಾಕ್ಸ್ ನಿಂದ ಹೊರಬರಲಾರದೆ ಮಕ್ಕಳಿಬ್ಬರೂ ಸಾವಿಗೀಡಾಗಿದ್ದರು. ಸುಮಾರು 2 ಗಂಟೆಗಳ ನಂತರ ಮಕ್ಕಳನ್ನು ಹುಡುಕಾಡಿದಾಗ ಬಾಕ್ಸ್ ನಲ್ಲಿ ಮೃತದೇಹಗಳು ಪತ್ತೆಯಾಗಿವೆ.


ಘಟನೆ ತಿಳಿದು ತೀವ್ರ ಆಘಾತಕ್ಕೊಳಗಾದ ಶಾಸಕ ಹರ್ಷವರ್ಧನ್ ಬಾಲಕಿಯರ ಮನೆಗಳಿಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಜೊತೆಗೆ ಪಾಲಕರಿಗೆ ಆರ್ಥಿಕ ನೆರವನ್ನೂ ನೀಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم