ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಜ್ಯಮಟ್ಟದ ದಿ. ಡಾ. ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿ ಪ್ರಕಟ

ರಾಜ್ಯಮಟ್ಟದ ದಿ. ಡಾ. ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿ ಪ್ರಕಟ


ಬೆಂಗಳೂರು: ತುಮಕೂರಿನ ನಾಡಿಗ್ ಸಾಹಿತ್ಯ ಪ್ರತಿಷ್ಠಾನ ಕೊಡುವ 2020 ಹಾಗೂ 20221ನೇ ಸಾಲಿನ ರಾಜ್ಯಮಟ್ಟದ ದಿ.ಡಾ. ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿ ಪ್ರಕಟವಾಗಿದೆ.


2020ನೇ ಸಾಲಿನ ದಿ. ಡಾ.ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿಗೆ ಗ್ರಾಮೀಣ ಭಾಗದಲ್ಲಿ ಕಳೆದ 35 ವರ್ಷಗಳಿಂದ "ರೂರಲ್ ಎಕ್ಸ್‌ಪ್ರೆಸ್" ಎಂಬ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಪತ್ರಿಕೆಯ ಸಂಪಾದಕರಾದ ಸೊರಬ ತಾಲ್ಲೂಕಿನ ಆನವಟ್ಟಿಯ ಎಂ. ಜಗನ್ನಾಥ್‌ ಹಾಗೂ ಡಾ. ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಆರ್ ವಾದಿರಾಜುರವರ "ಸಾರ್ಥಕ ಸಾಧನೆ" ಕೃತಿಯನ್ನು ಆಯ್ಕೆಮಾಡಲಾಗಿದೆ.


2021ನೇ ಸಾಲಿನ ದಿ. ಡಾ.ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿಗೆ ಕಳೆದ 25 ವರ್ಷಗಳಿಂದ ಸಾಹಿತ್ಯಕ್ಕೆ ಮೀಸಲಾದ ಮಂಡ್ಯದ ಆಡ್ವೈಸರ್ ಮಾಸಪತ್ರಿಕೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಸಂಪಾದಕರಾದ ಸಿ. ಬಸವರಾಜು ಹಾಗೂ ಡಾ. ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿಗೆ ಪ್ರದೀಪ್ ಬೇಲೂರ್‌ ಅವರ "ಎಲವೋ ವಿಭೀಷಣ" ಕಥಾ ಸಂಕಲನವನ್ನು ಆಯ್ಕೆ ಮಾಡಲಾಗಿದೆ.


ಪ್ರಶಸ್ತಿ ಪ್ರದಾನ ಸಮಾರಂಭ ಇದೇ ತಿಂಗಳ ಕೊನೆಯಲ್ಲಿ ತುಮಕೂರಿನಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಚಾಲಕರಾದ ಅಶ್ವಿನಿ ಪಿ ನಾಡಿಗ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم