ಕಾಸರಗೋಡು: ಡಾ. ವಾಣಿಶ್ರೀ ಅವರ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಇದರ ವತಿಯಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ಕಾಸರಗೋಡಿನ ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ನೂತನ ಬಿಂಬ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಭವ್ಯ ವೇದಿಕೆಯಲ್ಲಿ ಮೇ 10ರಂದು ಜರುಗಿತು.
ಈ ಕಾರ್ಯಕ್ರಮದ ನಿರೂಪಣೆಯನ್ನು ಡಾ. ವಾಣಿಶ್ರೀ ಕಾಸರಗೋಡು ಮಾಡಿದರು. ಗುರುರಾಜ್ ಕಾಸರಗೋಡು ಸಂಘದ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಟ್ಟ ರತ್ನಾಕರ, ಶಂಕರನಾರಾಯಣ ಮಯ್ಯ ಗಣೇಶ್ ಭಟ್ ಹಾಗೂ ಸರ್ವ ಪದಾಧಿಕಾರಿಗಳಿಗೆ ಸಂಘದ ವತಿಯಿಂದ ಧನ್ಯವಾದ ತಿಳಿಸಿದರು. ಸಂಘದ ಕೋಶಾಧಿಕಾರಿ ಡಾ. ವೆಂಕಟ ಗಿರೀಶ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಘದ ಹೆಮ್ಮೆಯ ಕಲಾವಿದರಾದ ಶ್ಯಾಮಲಾ ಸಂಪತ್ತಿಲ, ಧನ್ವಿ ರೈ ಕೋಟೆ, ಪ್ರಣಮ್ಯ ದೇವಿ, ಡಾ. ಹರಿಕಿರಣ ಬಂಗೇರ, ಸುಪ್ರಿಯಾ ಹೊಸಮನೆ, ಪ್ರಖ್ಯಾತ್ ಭಟ್, ಪ್ರಜ್ಞಾ ಪಿ ಎಸ್, ಕಿಶನ್ ಅಗ್ಗಿತ್ತಾಯ, ಸನುಷ, ರಾಜೇಶ, ಅಹನ ಎಸ್ ರಾವ್ ಮುಂತಾದವರು ತಮ್ಮ ತಮ್ಮ ಪ್ರತಿಭಾ ಚತುರತೆಯನ್ನು ಮೆರೆದರು.
ಡಾ ವಾಣಿಶ್ರೀ ಕಾಸರಗೋಡು ಮಾತನಾಡುತ್ತಾ, ಸಾಂಸ್ಕೃತಿಕ ಚಟುವಟಿಕೆಗಳು ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಭಕ್ತಿಯಿಂದ ಹಾಡಿ ನರ್ತಿಸಿದರೆ ಅದುವೇ ದೇವರಿಗೆ ಅರ್ಚನೆ ಎಂದು ಹೇಳಿದರು. ದೇವಳದ ವತಿಯಿಂದ ಸ್ಮರಣಿಕೆ ಹಾಗೂ ಪ್ರಸಾದ ಕೊಟ್ಟು ಸತ್ಕರಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق