ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕದ್ರಿ ದೇವಸ್ಥಾನದ ಬಳಿ 1.15 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಚಾಲನೆ

ಕದ್ರಿ ದೇವಸ್ಥಾನದ ಬಳಿ 1.15 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಚಾಲನೆ



ಮಂಗಳೂರು: ನಗರದ ಎಲ್ಲಾ ಕಡೆಗಳಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ನಮ್ಮ ಸರಕಾರ ಬಂದ ಮೇಲೆ ವೇಗ ನೀಡಲಾಗಿದೆ. ಮುಂದಿನ ಕೆಲ ವರ್ಷಗಳಲ್ಲಿ ನಗರವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲಿದ್ದು ರಾಜ್ಯದ ಮಾದರಿ ನಗರವಾಗಿ ಬೆಳೆಯಲಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.


ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ದಕ್ಷಿಣ ವಾರ್ಡಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಬಳಿ 1.15 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರದೆಲ್ಲೆಡೆ ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿದೆ. ರಸ್ತೆ ಹೊರತುಪಡಿಸಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುವ ಕಡೆಗಳಲ್ಲಿ ರಾಜಕಾಲುವೆ, ಒಳಚರಂಡಿ ವ್ಯವಸ್ಥೆಯ ಅಭಿವೃದ್ಧಿಗೂ ವೇಗ ನೀಡಲಾಗಿದೆ ಎಂದರು.


ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಬಳಿ 1.15 ಕೋಟಿ ವೆಚ್ಚದಲ್ಲಿ ರಾಜಕಾಲುವೆಯ ತಡೆಗೋಡೆ, ಒಳಚರಂಡಿ ವ್ಯವಸ್ಥೆ ಹಾಗೂ ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಈ ಭಾಗದ ಜನರ ಸಮಸ್ಯೆಯನ್ನು ಮನಗಂಡು ಸ್ಥಳೀಯ ಕಾರ್ಪೋರೆಟರ್ ಅವರ ಮನವಿಯ ಮೇರೆಗೆ ಅನುದಾನ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.


ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಅಭಿವೃದ್ಧಿ ಹಾಗೂ ಹೂಳೆತ್ತುವ ಕಾಮಗಾರಿ ಪ್ರಾರಂಭಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ನೆರೆ ಉಕ್ಕುವ ಕಡೆಗಳಲ್ಲಿ ರಾಜಕಾಲುವೆಗಳ ತಡೆಗೋಡೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿವೆ ಎಂದರು.


ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಕದ್ರಿ ಮನೋಹರ್ ಶೆಟ್ಟಿ, ಶಕಿಲಾ ಕಾವಾ, ಪ್ರಮುಖರಾದ ದಿನೇಶ್ ದೇವಾಡಿಗ, ಶ್ರೀಕಾಂತ್ ರಾವ್, ಶಾಲಿನಿ ವಿಶ್ವನಾಥ್ ಆಚಾರ್, ಕೃಷ್ಣ ಶೆಟ್ಟಿ, ವಸಂತ್ ಜೆ ಪೂಜಾರಿ, ದೇವಿಚರಣ್ ಶೆಟ್ಟಿ, ಮನೀಷ್ ಪಾಂಡ್ಯ, ಗೋಪಾಲ ಕೃಷ್ಣ ರಾವ್, ತುಳಸಿದಾಸ್ ಕದ್ರಿ, ಪ್ರದೀಪ್ ಆಚಾರ್ಯ, ಸೋಮನಾಥ್ ದೇವಾಡಿಗ, ಯಶವಂತ ನಾಯಕ್, ಗಾಡ್ವಿನ್,‌ ಕೇಶವ ಕದ್ರಿ,‌ ಪ್ರಕಾಶ್, ಚಂದ್ರಕಾಂತ್, ಜಗದೀಶ್ ಕದ್ರಿ, ಅವಿನಾಶ್ ರೈ, ಹೇಮಚಂದ್ರ, ಸಚಿನ್ ಕದ್ರಿ, ಕೌಶಿಕ್, ವಿವೇಕ್ ಕದ್ರಿ, ವಿನಯ್ ಕದ್ರಿ, ದಿವಾಕರ್ ಕದ್ರಿ, ಶಿವಪ್ಪ ನಂತೂರು, ರಂಜನ್, ಸತ್ಯನಾರಾಯಣ ರಾವ್, ನರೇಶ್ ರಾವ್, ವಿಜಯ್ ಭಂಡಾರಿ, ಸಂಜೀವ ಅಡ್ಯಾರ್, ವೆಂಕಟೇಶ್, ಕೌಶಿಕ್, ಅನಂತ್ ಅಂಚನ್, ನಾಗೇಶ್ ಕದ್ರು, ರವಿ, ದಿನೇಶ್ ದೇವಾಡಿಗ ಕಂಬ್ಳೆ ರಾಘವೇಂದ್ರ ಬಿರ್ವತ್ತಾಯ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم