ಮಂಗಳೂರು: ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಬಳಿ 1.62 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಸಂಪರ್ಕಿಸುವ ಕದ್ರಿ ನ್ಯೂರೋಡ್ ಅಭಿವೃದ್ಧಿಗೆ 1.62 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ರಸ್ತೆ ಕಾಮಗಾರಿಗೂ ಮೊದಲು ಜಲಸಿರಿ ಯೋಜನೆಯ ಪೈಪ್ ಅಳವಡಿಕೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ರಸ್ತೆ ನಿರ್ಮಾಣದ ಜೊತೆ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಕೂಡ ಮಾಡಲಾಗುವುದು ಎಂದರು.
ದೇವಸ್ಥಾನ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಈ ರಸ್ತೆಯ ಕಾಮಗಾರಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಬಹುದು,ಆದರೆ ಅಭಿವೃದ್ಧಿಯ ನೆಲೆಯಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಶಕೀಲಾ ಕಾವ, ಪಾಲಿಕೆ ಸದಸ್ಯರಾದ ಕದ್ರಿ ಮನೋಹರ್ ಶೆಟ್ಟಿ, ಮುಖಂಡರಾದ ರೂಪಾ ಡಿ. ಬಂಗೇರ, ರಾಮಕೃಷ್ಣ ರಾವ್, ಸುಧಾಕರ್ ಪೇಜಾವರ, ಸಂಜೀವ ಅಡ್ಯಾರ್, ದೇವಿಕಿರಣ್ ಶೆಟ್ಟಿ, ಪೂರ್ಣಿಮಾ ಪೇಜಾವರ, ಪ್ರಸನ್ನ ಕಂಡೆಟ್ಟು, ಗಾಯತ್ರಿ ಗುಂಡಳಿಕೆ, ನಯನ ವಿಶ್ವನಾಥ್, ಕುಸುಮಾ ದೇವಾಡಿಗ, ವೆಂಕಟೇಶ್ ಕದ್ರಿ, ಸಂತೋಷ್ ನಂತೂರು, ಕಮಲಾಕ್ಷಿ ಗಂಗಾಧರ್, ಉಮಾ ಕಂಡೆಟ್ಟು, ಸುಂದರ್ ಶೆಟ್ಟಿ, ವಾಸುದೇವ್ ಭಟ್, ಗಂಗಾಧರ್ ಕದ್ರಿ, ಜಗದೀಶ್, ಸಹನ್ ಕದ್ರಿ, ಸುರೇಶ್, ಶಾಲಿನಿ ಆಚಾರ್, ಜಯಲಕ್ಷ್ಮಿ, ಮಹೇಶ್ ಕಂಡೆಟ್ಟು, ಸುರೇಂದ್ರ ಶೆಟ್ಟಿ, ದ್ರಿತೇಶ್ ಗುಂಡಳಿಕೆ, ಕಮಲಾಕ್ಷಿ ಮುಂಡಾನ, ಶಶಾಂಕ್ ಮುಂಡಾನ, ಶ್ರವಣ್, ಸಚಿನ್, ಹೇಮಂತ್ ಕದ್ರಿ, ರಾಘು, ಮಹೇಶ್ ಕಂಡೆಟ್ಟು, ಶಾಲಿನಿ, ಪ್ರಭಾಕರ ಪೇಜಾವರ, ರವಿ ಕದ್ರಿ, ರಾಮಣ್ಣ, ಸುಜಿತ್, ಕೇಶವ್ ಕದ್ರಿ, ಸುಜಿ, ಪಾಲಿಕೆ ಅಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق