ಕುಂಬಳೆ: ಇಲ್ಲಿಗೆ ಸಮೀಪದ ನಾರಾಯಣಮಂಗಲ ಬಳಿಯ ಕಾನಮಠ ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಮಹಾಸಂಕಲ್ಪ ಸಮಾರಂಭ ಮೇ 17 ಮತ್ತು 18ರಂದು ನಡೆಯಲಿದೆ.
17ರಂದು ಸಂಜೆ 5 ಗಂಟೆಗೆ ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ಮಂಟಪ ಸಂಸ್ಕಾರ, ಅರಣಿ ಮಥನ, 7:30ರಿಂದ ಶ್ರೀ ಶಂಕರನಾರಾಯಣ ದೇವರಿಗೆ ಕಾರ್ತಿಕ ಪೂಜೆ, ಅತ್ತಾಳ ಪೂಜೆ ಜರಗಲಿದೆ.
18ರಂದು ಪ್ರಾತಃಕಾಲ 5ಕ್ಕೆ ದೇವತಾ ಪ್ರಾರ್ಥನೆಯೊಂದಿಗೆ ತ್ರಿಕಾಲ ಪೂಜೆ ಆರಂಭ, ದೀಪ ಪ್ರಜ್ವಲನೆ, 6:16ಕ್ಕೆ ತ್ರಿಕಾಲ ಪೂಜೆಯ ಬೆಳಗ್ಗಿನ ಮಂಗಳಾರತಿ, 7 ಗಂಟೆಗೆ ಶ್ರೀ ಶಂಕರನಾರಾಯಣ ದೇವರಿಗೆ ಶತರುದ್ರಾಭಿಷೇಕ, 9 ಗಂಟೆಗೆ ಅಷ್ಟೋತ್ತರಶತ ನಾರಿಕೇಳ ಮಹಾಗಣಪತಿ ಹವನ, 11:30ಕ್ಕೆ ಮಹಾ ಪೂರ್ಣಾಹುತಿ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಅಷ್ಟಾವಧಾನ ಸೇವೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಜೀರ್ಣೋದ್ಧಾರದ ಪೂರ್ವ ಭಾವಿಯಾಗಿ ದೈವಜ್ಞರು ಸೂಚಿಸಿದ ಪ್ರಕಾರ ಮರ ಕಡಿಯುವ ಮುಹೂರ್ತ ಇಂದು- ಭಾನುವಾರ ಬೆಳಗ್ಗೆ ನೆರವೇರಿತು. ಕ್ಷೇತ್ರಾಚಾರ್ಯರಾದ ಗುಣಾಜೆ ಈಶ್ವರ ಭಟ್ಟರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಮೂಡ ಕೋಣಮ್ಮೆ ವೆಂಕಟರಮಣ ಭಟ್ಟರು ಕಾಣಿಕೆಯಾಗಿ ನೀಡಿದ ಹಲಸಿನ ಮರವನ್ನು ನಾಳೆ ಕಡಿಯಲಾಗುವುದು ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಲರಾಮ ಭಟ್ಟ ಕಾಕುಂಜೆ, ಮಹೇಶ್ ಭಟ್, ಕಾನ ಮೂಡಕರೆ (ಕಾರ್ಯದರ್ಶಿ), ರವಿಶಂಕರ ಭಟ್, ಉಪ್ಪಂಗಳ (ಕೋಶಾಧಿಕಾರಿ) ಅವರು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment