ಮಂಗಳೂರು: ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಮೇ4 ರಿಂದ 8 ರ ವರೆಗೆ ನಾರಿಕೇಳ ಗಣಯಾಗ, ಲಘುರುದ್ರಯಾಗ, ಲಲಿತಾ ಸಹಸ್ರ ಕದಳೀ ಯಾಗ, ರಾಮತಾರಕ ಮಂತ್ರಯಾಗ ಹಾಗೂ ಶತಚಂಡಿಕಾ ಯಾಗ ಮುಂತಾದ ಸತ್ಕಾರ್ಯಗಳು ನಡೆದವು.
ಈ ಸಂದರ್ಭದಲ್ಲಿ ಉಭಯ ಜಿಲ್ಲೆಗಳ ನೂರಕ್ಕೂ ಹೆಚ್ಚು ದೇವಾಲಯಗಳ ಕುರಿತು ಅಧ್ಯಯನ ನಡೆಸಿ ಸಂಶೋಧನಾತ್ಮಕ ಲೇಖನಗಳನ್ನು ಬರೆದ, ಜಾನಪದ ಸಂಶೋಧಕ, ನಾಗಾರಾಧನೆ, ಭೂತಾರಾಧನೆ ಸಹಿತ ಜನಪದರ ಆಚರಣೆಗಳ ಕುರಿತು ಬರೆದ ಕೆ.ಎಲ್. ಕುಂಡಂತಾಯ ಅವರನ್ನು ಸಮ್ಮಾನಿಸಲಾಯಿತು. ಸುರತ್ಕಲ್ ಶಾಸಕ ಡಾ.ವೈ ಭರತ ಶೆಟ್ಟಿ, ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್, ದೇವಳದ ಆನುವಂಶಿಕ ಮೊಕ್ತೇಸರ ಡಾ.ಮಯ್ಯ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment