ಮಣಿಪಾಲ: ಸ್ವಚ್ಛ ಭಾರತ್ ಮಿಷನ್ (ಗ್ರಾ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಸರ್ಕಾರದ ರಾಜ್ಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ತಜ್ಞರಾದ ಮಲ್ಲಿಕಾರ್ಜುನ ಪಿ.ಎಸ್. ಉಡುಪಿ ಜಿಲ್ಲೆಯ ಮಣಿಪಾಲದ ಮಣಿಪಾಲ್ ಇನ್ಸ್ಟಿಟ್ಯೂಟ್ ಅಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೋ ಮಣಿಪಾಲ 90.4 MHz ಸಮುದಾಯ ಬಾನುಲಿ ಕೇಂದ್ರಕ್ಕೆ ಬುಧವಾರ ಭೇಟಿನೀಡಿದರು.
ಇಲಾಖೆ ಅನುಷ್ಠಾನ ಮಾಡುತ್ತಿರುವ “ಸ್ವಚ್ಛ ಭಾರತ್ ಮಿಷನ್ (ಗ್ರಾ) ಮತ್ತು ಜಲ ಜೀವನ್ ಮಿಷನ್ ಯೋಜನೆ” ಗಳಂತಹ ಅಭಿವೃದ್ಧಿ ಕಾರ್ಯಕ್ರಮಗಳನ್ನು ಗ್ರಾಮೀಣ ಜನರಿಗೆ ಅರ್ಥೈಸುವ ದೃಷ್ಟಿಯಿಂದ ವಿವಿಧ ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆ ಕಾರ್ಯಕ್ರಮಗಳನ್ನು ರೇಡಿಯೋ ಮಣಿಪಾಲ ಸಮುದಾಯ ಬಾನುಲಿ ಕೇಂದ್ರದಿಂದ ಪ್ರಸಾರಮಾಡಲಾಗುತ್ತಿರುವ ಕುರಿತು ಮಾಹಿತಿ ಪಡೆದುಕೊಂಡು ಪರಿಶೀಲನೆ ಮಾಡಿ ಅಗತ್ಯ ಸಲಹೆಗಳನ್ನು ನೀಡಿದರು.
ರೇಡಿಯೋ ಮಣಿಪಾಲ ಸಮುದಾಯ ಬಾನುಲಿ ಕೇಂದ್ರದಿಂದ ‘ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವಸಂಕುಲ’ ಎನ್ನುವ ಶೀರ್ಷಿಕೆಯುಳ್ಳ ಸರಣಿ ಕಾರ್ಯಕ್ರಮವನ್ನು ವಿವಿಧ ರೀತಿಯ ಜಿಂಗಲ್ಸ್, ಸಂದರ್ಶನ, ನೇರ ಫೋನ್-ಇನ್/ಅಂತರ್ ಸಂವಹನ ಕಾರ್ಯಕ್ರಮ, ನುಡಿಚಿತ್ರ, ಪ್ರಕರಣ ಅಧ್ಯಯನ, ಅನುಭವ ಹಂಚಿಕೆ, ಕಥೆ, ನಾಟಕ, ಸ್ಫೂರ್ತಿದಾಯಕ ಮಾತುಗಳು, ಸಲಹೆ ಹೀಗೆ ಹಲವು ಬಾನುಲಿ ಕಾರ್ಯಕ್ರಮ ಪ್ರಕಾರಗಳ ಮೂಲಕ ರೇಡಿಯೋ ಮಣಿಪಾಲ ಸಮುದಾಯ ಬಾನುಲಿ ಕೇಂದ್ರವು ಕೇಳುಗರಿಗೆ ಅರಿವು ಮೂಡಿಸುತ್ತಿರುವರುವ ಕುರಿತಾಗಿ ರೇಡಿಯೊ ಮಣಿಪಾಲದ ಸಂಯೋಜಕರಾದ ಡಾ.ರಶ್ಮಿ ಅಮ್ಮೆಂಬಳ ಮಾಹಿತಿ ನೀಡಿದರು.
ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ನ ನಿರ್ದೇಶಕರಾದ ಡಾ. ಪದ್ಮಾರಾಣಿ ರೇಡಿಯೋ ಮಣಿಪಾಲ ಸ್ಟುಡಿಯೋ ಸವಲತ್ತುಗಳ ಕುರಿತಾಗಿ ಪರಿಚಯಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ನ ಜಿಲ್ಲಾ ಐಇಸಿ ಸಮಾಲೋಚಕರಾದ ಪ್ರದೀಪ್ ರಾಜ್, ಸಿಬ್ಬಂದಿಗಳಾದ ಮಂಜುನಾಥ್, ಸುಧೀರ್ ಹಾಗೂ ಪೀಟರ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment