ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುಂಜಾಲಕಟ್ಟೆ ಸರಕಾರಿ ಪ್ರ.ದ. ಕಾಲೇಜು ಎನ್ನೆಸ್ಸೆಸ್‌ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಪುಂಜಾಲಕಟ್ಟೆ ಸರಕಾರಿ ಪ್ರ.ದ. ಕಾಲೇಜು ಎನ್ನೆಸ್ಸೆಸ್‌ ವಾರ್ಷಿಕ ವಿಶೇಷ ಶಿಬಿರ ಸಮಾರೋಪ



ಪುಂಜಾಲಕಟ್ಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 &2 ರ 2021-22ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಸೋಮವಾರ (ಮೇ 16) ಸರ್ಕಾರಿ ಪ್ರೌಢಶಾಲೆ ನಯನಾಡು ಇಲ್ಲಿ ಜರಗಿತು.


ಡಾ. ಟಿ. ಕೆ. ಶರತ್ ಕುಮಾರ್, ಪ್ರಾಂಶುಪಾಲರು ಸ.ಪ್ರ.ದ.ಕಾಲೇಜು ಪುಂಜಾಲಕಟ್ಟೆ ಇವರು ಶಿಬಿರದಲ್ಲಿ ಅಧ್ಯಕ್ಷತೆಯನ್ನು ವಹಿಸಿ, ಅಧ್ಯಕ್ಷೀಯ ನುಡಿಗಳನ್ನಾಡಿದರು. ಇಲ್ಲಿ ಶ್ರೀಮತಿ ಹರ್ಷಿಣಿ ಎಂ. ಅಧ್ಯಕ್ಷರು ,ಗ್ರಾಮ ಪಂಚಾಯತ್ ಪಿಲಾತಬೆಟ್ಟು, ಶ್ರೀ ಹರೀಂದ್ರ ಡಿ ಪೈ, ಉದ್ಯಮಿಗಳು ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರಿ ನಯನಾಡು, ಶ್ರೀ ಜೋಯೆಲ್ ಲೋಬೊ ಮುಖ್ಯೋಪಾಧ್ಯಾಯರು ಸ.ಪ್ರೌ. ಶಾಲೆ ನಯನಾಡು ವೇದಿಕೆಯಲ್ಲಿ ಆಸೀನಾಗಿದ್ದರು.


ಶಿಬಿರದ ಯಶಸ್ಸಿಗೆ ಸಹಕರಿಸಿದವರ ವಿವರವನ್ನು ಶಿಬಿರಾರ್ಥಿ ಪ್ರಮೋದ್ ಮತ್ತು ಧೀರಜ್ ಇವರು ಮಂಡಿಸಿದರು. ಅಧ್ಯಕ್ಷರು,SDMC, ನಯನಾಡು ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹರೀಶ್ ಪೂಜಾರಿ, ಸಾಂತಪ್ಪ ಕಲ್ಮಂಜ ಯುವ ಪರಿವರ್ತಕರು, ಯುವಸ್ಪಂದನ ಮಂಗಳೂರು, ಶ್ರೀಮತಿ ಜಯಲಕ್ಷ್ಮೀ ಹೆಗ್ಗಡೆ ಅಧ್ಯಕ್ಷರು, ಧ.ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ನಯನಾಡು, ಮಿಥುನ್ ಪ್ರಭು ಶಾಲಾ ವಿದ್ಯಾಭಿಮಾನಿ ನೇರಳಕಟ್ಟೆ ಉಪಸ್ಥಿತರಿದ್ದರು.


ಶಿಬಿರಾರ್ಥಿ ಮಧುರ ಇವರು ವಾರ್ಷಿಕ ವಿಶೇಷ ಶಿಬಿರದ ವರದಿಯನ್ನು ಮಂಡಿಸಿದರು. ಶಿಬಿರಾರ್ಥಿ ನಿರಂಜನ್ ಮತ್ತು ಲಿಖಿತ್ ಇವರು ಶಿಬಿರದಲ್ಲಿ ಕೊಟ್ಟಂತಹ ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ ತಂಡಕ್ಕೆ ಬಹುಮಾನ ವಿತರಣೆಯನ್ನು ನಿರೂಪಿಸಿದರು.


ಶಿಬಿರಾಧಿಕಾರಿ ಪ್ರೊ. ದೀಕ್ಷಿತಾ ವರ್ಕಾಡಿ ಮತ್ತು ಪ್ರೊ.ಸಂತೋಷ್  ಪ್ರಭು ಎಂ. ಉಪಸ್ಥಿತರಿದ್ದರು. ಹಾಗೆಯೇ ಶಿಕ್ಷಕ ವೃಂದ ಸ.ಪ್ರೌ.ಶಾಲೆ ನಯನಾಡು ಮತ್ತು ಶಿಕ್ಷಕ ವೃಂದ ಸ.ಪ್ರ.ದ.ಕಾಲೇಜು ಪುಂಜಾಲಕಟ್ಟೆ ಹಾಗೂ ರಾ. ಸೇ. ಯೋ. ಪದಾಧಿಕಾರಿಗಳು ಮತ್ತು ಎಲ್ಲ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶಿಬಿರಾರ್ಥಿ ಸುಚಿತ್ರ   ಸ್ವಾಗತಿಸಿದರು. ಶಿಬಿರಾರ್ಥಿ ರಾಜೇಶ್ವರಿ ನಿರೂಪಿಸಿ, ಶಿಬಿರಾರ್ಥಿ ಕಿರಣ್ ಕುಮಾರ್ ವಂದಿಸಿದರು. ಕಾರ್ಯಕ್ರಮವನ್ನು ವಿದಾಯ ಗೀತೆ ಹಾಡುವ ಮೂಲಕ ಕೊನೆಗೊಳಿಸಲಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post