ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೂರು ಬೈಕ್ ಗಳ ನಡುವೆ ಅಪಘಾತ ; ನಾಲ್ವರು ಸಾವು

ಮೂರು ಬೈಕ್ ಗಳ ನಡುವೆ ಅಪಘಾತ ; ನಾಲ್ವರು ಸಾವು

 


ತುಮಕೂರು: ಮೂರು ಬೈಕ್ ಗಳ ನಡುವೆ  ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ತುಮಕೂರಿನಲ್ಲಿ ಶನಿವಾರ ನಡೆದಿದೆ.

ಕುಣಿಗಲ್ ತಾಲೂಕಿನ ಜಲಧಿಗೆರೆ ಕಡೆಯಿಂದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಕಲ್ಲೂರು ಕಡೆಗೆ ಬೈಕ್‌ಗಳಲ್ಲಿ ಈ ನಾಲ್ವರು ತೆರಳುತ್ತಿದ್ದರು.

ಇದೇ ವೇಳೆ ಕಲ್ಲೂರು ಕಡೆಯಿಂದ ಸ್ಪ್ಲೆಂಡರ್ ಬೈಕ್‌ನಲ್ಲಿ ಇಬ್ಬರು ಬರುತ್ತಿದ್ದರು.

ಈ ಮೂರು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾಯಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0 تعليقات

إرسال تعليق

Post a Comment (0)

أحدث أقدم