ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಸ್ತಂತು ಚಾಲನಾ ತರಬೇತಿ: ದ.ಕ. ಜಿಲ್ಲಾ ಗೃಹರಕ್ಷಕಿ ರೇಣುಕಾಗೆ ಬೆಳ್ಳಿಯ ಪದಕ

ನಿಸ್ತಂತು ಚಾಲನಾ ತರಬೇತಿ: ದ.ಕ. ಜಿಲ್ಲಾ ಗೃಹರಕ್ಷಕಿ ರೇಣುಕಾಗೆ ಬೆಳ್ಳಿಯ ಪದಕ



ಮಂಗಳೂರು: ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ಏಪ್ರಿಲ್ 01 ರಿಂದ 08ರ ವರೆಗೆ 6 ದಿನಗಳು ನಡೆದ ಗೃಹರಕ್ಷಕಿಯರ “ನಿಸ್ತಂತು ಚಾಲನಾ ತರಬೇತಿ”ಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯ ಗೃಹರಕ್ಷಕರು ಭಾಗವಹಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಘಟಕದ ಗೃಹರಕ್ಷಕಿಯರಾದ ರೇಣುಕಾ, ಮೆಟಲ್ ನಂ. 173 ಮತ್ತು ಉಷಾ, ಮೆಟಲ್ ನಂ. 151 ಇವರು ಯಶಸ್ವಿಯಾಗಿ ತರಬೇತಿಯನ್ನು ಪೂರೈಸಿರುತ್ತಾರೆ.


ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕಿ ರೇಣುಕಾ, ಮೆಟಲ್ ನಂ. 173, ಮಂಗಳೂರು ಘಟಕ ಇವರು ಬೆಳ್ಳಿಯ ಪದಕ ವಿಜೇತರಾಗಿರುತ್ತಾರೆ. ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ.ಮುರಲೀ ಮೋಹನ್ ಚೂಂತಾರು ರವರು ಅಭಿನಂದಿಸಿರುತ್ತಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم