ಬಂಟ್ವಾಳ: ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘವು ತನ್ನ ವ್ಯಾಪ್ತಿಯಲ್ಲಿನ ಕೃಷಿಕರಿಗೆ ಸಾಲ ಸೌಲಭ್ಯ ನೀಡುವುದರೊಂದಿಗೆ ರೈತರಿಗೆ ಪೂರಕವಾದ ಯೋಜನೆ, ಯೋಚನೆ ಹಾಕಿಕೊಂಡು ಸೇವೆ ನೀಡುತ್ತಿರುವುದು ಶ್ಲಾಘನಿಯವಾಗಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದೀಗ ಅಡಿಕೆ ತೋಟಗಾರಿಕೆ ಬೆಳೆಗಾರರಿಗೆ ಅಡಿಕೆ ಕೊಯ್ಲು ಮತ್ತು ಔಷದಿ ಸಿಂಪಡನೆ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ಏರ್ಪಡಿಸಿರುವುದು ಸ್ವಾಗತಾರ್ಹ ಎಂದು ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಅಭಿಪ್ರಾಯ ಪಟ್ಟರು.
ಅವರು ಇಂದು ಸಂಘದ ವತಿಯಿಂದ ಹಾಗೂ ರೋಟರಿ ಕ್ಲಬ್ ಫಲ್ಗುಣಿ ಸಿದ್ದಕಟ್ಟೆ, ರೋಟರಿ ಕ್ಲಬ್ ಲೋರಟ್ಟೋ ಹಿಲ್ಸ್, ಚೈತನ್ಯ ಕೃಷಿಕರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಾಗೂ ಸಾಯ ಎಂಟರ್ ಪ್ರೈಸಸ್ ಸಹಕಾರದಿಂದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಡಿಕೆ ಕೌಶಲ್ಯ ತರಬೇತಿ ಶಿಬಿರಕ್ಕೆ ಶುಭಾಶಯ ಕೋರಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತಾನಾಡಿ ಕೃಷಿಕರಿಗೆ ಮತ್ತು ಸಂಘದ ಸದಸ್ಯರಿಗೆ ಪೂರಕವಾಗಿರುವ ಎಲ್ಲಾ ಸಾಲ ಮತ್ತು ಇನ್ನಿತರ ಸೌಲಭ್ಯಗಳನ್ನು ನೀಡಲು ಸಂಘವು ಬದ್ದವಾಗಿದೆ.
ಅಡಿಕೆ ಕೊಯ್ಲು ಮತ್ತು ಔಷದಿ ಸಿಂಪಡಿಸಲು ಬೇಕಾಗುವ ಪೈಬರ್ ಕಾರ್ಬನ್ ದೊಟಿ ಖರೀದಿಸಲು ಸಂಘದ ವತಿಯಿಂದ ಸ್ವಲ್ಪ ನೆರವು ನೀಡಲು ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗುವುದು ಎಂದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಪೂಂಜಾ ದೇವಸ್ಥಾನದ ವ್ಯವಸ್ಥಾನ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ, ರೋಟರಿ ಕ್ಲಬ್ ಸಿದ್ದಕಟ್ಟೆ ಅಧ್ಯಕ್ಷ ಮೈಕಲ್ ಡಿಕೊಸ್ತ, ರೋಟರಿ ಲೋರಟ್ಟೋ ಹಿಲ್ಸ್ ಅಧ್ಯಕ್ಷ ರಾಘವೇಂದ್ರ ಭಟ್, ತರಬೇತುದಾರರಾದ ಆರ್. ಜಿ ಹೆಗಡೆ ಕುಮಟಾ, ರಮೇಶ್ ಭಟ್ ಕುಮಟಾ, ಚಂದಪ್ಪ ಮೂಲ್ಯ, ಬೇಲೂರೆ ಗೌಡ, ಸಿ ಇ ಓ ಆರತಿ ಶೆಟ್ಟಿ, ಸಾಯ ಎಂಟರ್ ಪ್ರೈಸಸ್ ನ ಪದ್ಮನಾಭ ಉಪಸ್ಥಿತರಿದ್ದರು.
ಸಭೆಯಲ್ಲಿ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ದಿನೇಶ್ ಪುಜಾರಿ ಹುಲಿಮೇರು, ಹರೀಶ್ ಆಚಾರ್ಯ ರಾಯಿ, ಉಮೇಶ್ ಗೌಡ, ಮಂದಾರತಿ ಶೆಟ್ಟಿ, ದೇವರಾಜ್ ಸಾಲಿಯಾನ್, ಜಾರಪ್ಪ ನಾಯ್ಕ, ಮಾಧವ ಶೆಟ್ಟಿಗಾರ್, ಪ್ರಮುಖ ರಾದ ಸದಾಶಿವ ಪೂವಳ ಕರ್ಪೆ, ಲೋಕೇಶ್ ಶೆಟ್ಟಿ ಸಿದ್ದಕಟ್ಟೆ, ಐತಪ್ಪ ಆಳ್ವ ಅಜ್ಜಿಬಾಕ್ಯಾರು, ವಿನೋದ ಅಡಪ, ರಾಮಣ್ಣ ರೈ ಮಾವಂತೂರು, ಪುರಂದರ ಭಟ್, ಸುಬ್ರಮಣ್ಯ ಭಟ್, ಸುಭಾಸ್ ಪರಾಡ್ಕರ್, ಚಂದ್ರಶೇಖರ ಗೌಡ ರಾಯಿ, ಶಶಿಧರ ರೈ ಅರಳ, ನವೀನ್ ಹೆಗ್ಡೆ, ಸೀತರಾಮ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ನಂತರ ಜಯರಾಮ ಅಡಪ ರವರ ಅಡಿಕೆ ತೋಟದಲ್ಲಿ ಪೈಬರ್ ದೊಟಿ ಯಿಂದ ಅಡಿಕೆ ಗೊನೆ ತೆಗೆಯುವ ಹಾಗೂ ಔಷದಿ ಬಿಡುವ ಬಗ್ಗೆ ಪ್ರಾತ್ಯಕ್ಸಿತೆ ನಡೆಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق