ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎಸ್.ಪಿ ಶೋಭಾ ಕಟಾವ್ಕರ್ ಶವವಾಗಿ ಮನೆಯಲ್ಲಿ ಪತ್ತೆ

ಎಸ್.ಪಿ ಶೋಭಾ ಕಟಾವ್ಕರ್ ಶವವಾಗಿ ಮನೆಯಲ್ಲಿ ಪತ್ತೆ

 


ಪುಟ್ಟೇನಹಳ್ಳಿ: ಎಸ್.ಪಿ.ಶೋಭಾ ಕಟಾವ್ಕರ್ (53) ಪುಟ್ಟೇನಹಳ್ಳಿಯ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ವೇಳೆ ಮನೆಯ ಸದಸ್ಯರೆಲ್ಲರೂ ಹಾಸನಕ್ಕೆ ತೆರಳಿದ್ದು, ಮನೆಯಲ್ಲಿ ಶೋಭಾ ಕಟಾವ್ಕರ್ ಒಬ್ಬರೇ ಇದ್ದರು.

ಹಾಸನಕ್ಕೆ ತೆರಳಿದ ಮನೆಯವರು ರಾತ್ರಿ 8 ಗಂಟೆ ಸುಮಾರಿಗೆ ಶೋಭಾರವರಿಗೆ ಫೋನ್ ಮಾಡಿದ್ದಾರೆ. ಅವರು ಉತ್ತರಿಸಿಲ್ಲ. ಹಾಗಾಗಿ ಸೆಕ್ಯುರಿಟಿಗೆ ಪರಿಶೀಲಿಸಲು ಸೂಚಿಸಿದ್ದಾರೆ. ಆಗ ಸಾವನ್ನಪ್ಪಿರುವುದು ಪತ್ತೆಯಾಗಿದೆ.

ಇತ್ತೀಚಿಗೆ ಎಸ್.ಪಿಯಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿದ್ದ ಶೋಭಾ, ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ವ್ಯಕ್ತಪಡಿಸಲಾಗಿದೆ.

ಪುಟ್ಟೇನಹಳ್ಳಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಎಸ್.ಪಿ ಶೋಭಾ ಅವರು ಕಲಬುರಗಿಯ ಪಿಟಿಸಿ ಉಪ ಪ್ರಾಂಶುಪಾಲರಾಗಿ ನಿಯೋಜನೆ ಗೊಂಡಿದ್ದರು.


0 تعليقات

إرسال تعليق

Post a Comment (0)

أحدث أقدم