ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚರಿತ್ರೆ ಮತ್ತು ವರ್ತಮಾನಗಳ ಮೂಲಕ ಭವಿಷ್ಯತ್ತನ್ನು ನಿರ್ಮಿಸುವ ಶಕ್ತಿ ಕಾವ್ಯಕ್ಕಿದೆ: ಅರವಿಂದ ಚೊಕ್ಕಾಡಿ

ಚರಿತ್ರೆ ಮತ್ತು ವರ್ತಮಾನಗಳ ಮೂಲಕ ಭವಿಷ್ಯತ್ತನ್ನು ನಿರ್ಮಿಸುವ ಶಕ್ತಿ ಕಾವ್ಯಕ್ಕಿದೆ: ಅರವಿಂದ ಚೊಕ್ಕಾಡಿ




ಮಂಗಳೂರು: ರೇಮಂಡ್ ಡಿಕೂನಾ ಸಾರಥ್ಯದಲ್ಲಿ ಪಿಂಗಾರ ಸಾಹಿತ್ಯ ಬಳಗದ ಮುಖಾಂತರ ಮಂಗಳೂರಿನ ಸಂದೇಶ ಪ್ರತಿಷ್ಠಾನ ಸಭಾ ಭವನದಲ್ಲಿ ವೈದ್ಯ ಕವಿ ಡಾಕ್ಟರ್ ಸುರೇಶ ನೆಗಳಗುಳಿ ಅವರ ಸಂಚಾಲಕತ್ವದಲ್ಲಿ ಎಪ್ರಿಲ್ 10 ರ ಇಳಿಹಗಲಿನಲ್ಲಿ ನಡೆಸಲ್ಪಟ್ಟ ಯುಗಾದಿ ಕವಿಗೋಷ್ಠಿ-, ಡಾ ಸುರೇಶ ನೆಗಳಗುಳಿ ರಚಿತ ಧೀರತಮ್ಮನ ಕಬ್ಬ ಮುಕ್ತಕ ಸಂಕಲನ‌ ವಿಮರ್ಶೆ ಹಾಗೂ ಚುಟುಕು ಭೋಜನ ಕೃತಿಯ ಲೋಕಾರ್ಪಣೆ ಸಮಾರಂಭಗಳು ಅತಿ ಯಶಸ್ವಿಯಾಗಿ ನಡೆದುವು.


ಮುಖ್ಯ ಅತಿಥಿಗಳೂ ಕೃತಿ ವಿಮರ್ಶಕರೂ ಆಗಿರುವ ಖ್ಯಾತ ಸಾಹಿತಿ ಅರವಿಂದ ಚೋಕ್ಕಾಡಿಯವರು ಧೀರತಮ್ಮನ‌ ಕಬ್ಬದ ಕೃತಿ ವಿಮರ್ಶೆ ಮಾಡುತ್ತಾ ಕಾವ್ಯದ ಪ್ರಕಾರ, ಪ್ರಭಾವ, ಪ್ರಭಾ ವಲಯ ಹಾಗೂ ವೈಖರಿಗಳ ಜಿಜ್ಞಾಸೆ ಮಾಡುತ್ತಾ ಕಾವ್ಯದ ಶಕ್ತಿ ಮತ್ತು ಭವಿಷ್ಯತ್ತನ್ನು ನಿರ್ಮಿಸುವ ತಾಕತ್ತುಗಳನ್ನು ಹಾಗೂ ಡಿ.ವಿ.ಜಿಯವರ ಮಂಕು ತಿಮ್ಮನ ಕಬ್ಬ ಎಂಬ ಆಧುನಿಕ‌ ಭಗವದ್ಗೀತೆಯ ಸರಳತೆ ಮತ್ತು ಪಡೆದ ಜನಪ್ರಿಯತೆಯಂತೆ ಧೀರತಮ್ಮನ ಕಬ್ಬವೂ ಕಗ್ಗದ ಸ್ಪೂರ್ತಿಯಾಗಿ ಮುಂದುವರಿದಿದೆ ಎನ್ನತ್ತಾ ಕೆಲವು ಮುಕ್ತಕ ಗಳನ್ನು ಓದಿ ವ್ಯಾಖ್ಯಾನಿಸಿದರು.


ಪುಸ್ತಕಗಳನ್ನು ಖರೀದಿಸಿ‌ ಉದ್ಘಾಟನೆ ನೆರವೇರಿಸಿದ ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ಫಾದರ್ ಪ್ರಾನ್ಸಿಸ್ ಅಸಿಸಿ ಅಲ್ಮೇಡಾ ರವರು ಮಾತನಾಡಿ, ಸಾರ್ವಜನಿಕ ಸಂಸ್ಥೆಗಳ ಸಭಾ ಭವನಗಳ ಮಾಲೀಕರು ತಮ್ಮ ಸಭಾಭವನಗಳನ್ನು ಸಾಹಿತ್ಯದ ಈ ರೀತಿಯ ಸಾಹಿತ್ಯ ಚಟುವಟಿಕೆಗಳಿಗೆ ಮುಕ್ತವಾಗಿ ಅವಕಾಶ ನೀಡುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ತಮ್ಮ ಸಭಾ ಭವನದ ಬಾಗಿಲು ಸಾಹಿತ್ಯ ಸಮಾರಂಭಗಳಿಗೆ ಸದಾ ತೆರದಿರುತ್ತದೆ ಎಂದರು.


ಪದೋನ್ನತಿಯಾಗಿ ಬೆಂಗಳೂರಿಗೆ ತೆರಳಲಿರುವ ಅವರನ್ನು ಹಾರ ಹಣ್ಣು ಶಾಲು ಸಹಿತ ಸನ್ಮಾನಿಸಲಾಯಿತು.


ಡಾ ಸುರೇಶ ನೆಗಳಗುಳಿ ಯವರ ಇನ್ನೊಂದು ‌ಕೃತಿ "ಚುಟುಕು ಭೋಜನ"ದ ಲೋಕಾರ್ಪಣೆಯು ಸಹ ಇದೇ ವೇದಿಕೆಯಲ್ಲಿ ಅಭಿಮೊ ಟೆಕ್ನಾಲಜಿ ಸಂಸ್ಥಾಪಕ ನವೀನ್ ನಾಯಕ್ ಉಳ್ಳಾಲ್ ಇವರ ದಿವ್ಯ ಹಸ್ತದಿಂದ ನೆರವೇರಿತು. 


ಅವರು ಮಾತನಾಢುತ್ತಾ ಇಂದಿನ ಮುಂದುವರಿದ ಯುಗದಲ್ಲಿ ಸಾಹಿತ್ಯ ಕೃತಿಗಳ ಡಿಜಿಟಲೀಕರಣ ಹಾಗೂ ಅಂತರ್ಜಾಲ ಮಾರಾಟದ ಬಗ್ಗೆಗಿರುವ ತಮ್ಮ‌ ಒಲವನ್ನು ವ್ಯಕ್ತ ಪಡಿಸಿದರಲ್ಲದೆ ತಾವೂ ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಲು ಸಂತಸ ವ್ಯಕ್ತಪಡಿಸಿದರು.


ಕಥಾ ಬಿಂದು ಪ್ರಕಾಶನದ ರೂವಾರಿ ಪಿ.ವಿ‌ ಪ್ರದೀಪ್ ಕುಮಾರ್ ರವರು ಶುಭಾ ಹಾರೈಸಿದರು. ಎರಡೂ ಕೃತಿಗಳಗೆ ಅರ್ಥಗರ್ಭಿತ ಆಕರ್ಷಕ ಮುಖಪುಟ ವಿನ್ಯಾಸ ಚಿತ್ರಿಸಿದ ಗೋಪಾಲಕೃಷ್ಣ ಶಾಸ್ತ್ರಿಯವರನ್ನು ಇದೇ ವೇಳೆ ಹೂ ನೀಡಿ ಗೌರವಿಸಲಾಯಿತು.


ಮೊದಲಿಗೆ ಡಾ ವಾಣಿಶ್ರೀ ಕಾಸರಗೋಡು ಹಾಗೂ ಗುರುರಾಜ ಎಂ ಆರ್ ಪ್ರಾರ್ಥನೆ ಹಾಡಿದರು. ರೇಮಂಡ್ ಡಿಕೂನಾರವರ ಸ್ವಾಗತಿಸಿದರು. ನಂತರ ಹೃದಯ ಕವಿ ನಾಮಾಂಕಿತ ಮನ್ಸೂರ್ ಮುಲ್ಕಿಯವರ ಅಧ್ಯಕ್ಷತೆಯ ಕವಿಗೋಷ್ಟಿಯು ನಡೆಯಿತು.


ಇಪ್ಪತ್ತಮೂರು ಕವಿಗಳ‌ ಕವನ‌ ವಾಚನ ದೊಂದಿಗೆ ಸಂಪನ್ನವಾದ ಕಾರ್ಯಕ್ರಮದಲ್ಲಿ ಸಕಲ ಕವಿಗಳ ಕವನದ ವಿಮರ್ಶೆ ಹಾಗೂ ಕಾವ್ಯದ ಮಹತ್ವದ ವಿಶ್ಲೇಷಣೆಯನ್ನು ಅವರು ಮಾಡಿದರು. ಕವಿಗೋಷ್ಠಿಯಲ್ಲಿ ಹೊರ ರಾಜ್ಯ ಸಹಿತದ ಕವಿಗಳೂ ಭಾಗವಹಿಸಿದ್ದರು.


ಮಾನಸ ಕೈಂತಜೆ, ರಶ್ಮಿ ಸನಿಲ್, ವಿಂಧ್ಯಾ ಎಸ್ ರೈ, ಚಂದ್ರಿಕಾ ಕೈರಂಗಳ, ಡಾ ವಾಣಿಶ್ರೀ ಕಾಸರಗೋಡು, ನವೀನ್ ಪಿರೇರಾ ಸುರತ್ಕಲ್, ಗೋಪಾಲಕೃಷ್ಣ ಶಾಸ್ತ್ರಿ, ಅನುರಾಧಾ, ಉಮೇಶ ಕಾರಂತ, ಗೀತಾ ಲಕ್ಷ್ಮೀಶ, ಹಿತೇಶ್ ಕುಮಾರ್, ಪ್ರಕಾಶ ಪಡಿಯಾರ್ ಮರವಂತೆ ರೇಖಾ ಸುದೇಶ್ ರಾವ್, ಕಿಶೋರ್ ಎಕ್ಕಾರ್, ಗುರುರಾಜ, ಜಯಲಕ್ಷ್ಮಿ ಶರತ್ ಶೆಟ್ಟಿ, ಗುಣಾಜೆ ರಾಮಚಂದ್ರ ಭಟ್, ವೆಂಕಟೇಶ ಗಟ್ಟಿ, ಅರ್ಚನಾ ಬಂಗೇರ, ಡಾ ಸುರೇಶ ನೆಗಳಗುಳಿ, ಮತ್ತು ರೇಮಂಡ್ ಡಿಕೂನಾ ರವರು ತಮ್ಮ‌ಸ್ವರಚಿತ ಕಾವ್ಯ ವಾಚನ ಮಾಡಿದರು.

ರಿಯಾನಾ ಡಿಕೂನಾ ನಿರೂಪಿಸಿದರು.  ಡಾ ಸುರೇಶ  ನೆಗಳಗುಳಿ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post