ಕಾಂಗ್ರೆಸ್‌ನವರು ಹೊಳೆ ಸಮೀಪಕ್ಕೆ ಪಾದ ಯಾತ್ರೆ!!
ಬಿಜೇಪಿಯವರದ್ದು ಧರ್ಮ ನಡಿಗೆ!!
ದಳದವರದ್ದು ಉದಕ (ಜಲಧಾರೆ) ಕಾರ್ಯಕ್ರಮ!!
ಒಟ್ಟಿನಲ್ಲಿ ಈ (ಪಂಚ) ವರ್ಷಾಂತಕ ದ ಚುನಾವಣೆಯಲ್ಲಿ ಹೊಳೆ ಸಮೀಪ ಧರ್ಮೋದಕ !!!
ಬಹುತೇಕ ಮುಂದಿನ ಏಪ್ರಿಲ್ ಮೇ ತಿಂಗಳಲ್ಲಿ ಚುನಾವಣಾ ಮಾಸಿಕ ಪ್ರಹಸನ!!
ಅದಕ್ಮುಂಚೆ...
ಸೈಕಲ್ಲು, ಲ್ಯಾಪ್‌ಟ್ಯಾಪ್, ವ್ಯಾಕ್ಸಿನ್, ಅಕ್ಕಿ, ಎಣ್ಣೆ, ಎಳ್ಳು(!?), ಗೋಧಿ, 'ವಸ್ತ್ರ' LED ಟಿವಿ, ಮಿಕ್ಸಿ, ಎಲೆಕ್ಟ್ರಿಕ್ ಬೈಕ್, ಮೊಬೈಲ್.... ಇತ್ಯಾದಿಗಳ ದಶದಾನ ಷೋಡಷ ದಾನ ವನ್ನು ಮತದಾರರಿಗೆ ಕೊಡಲು ಪ್ರಣಾಳಿಕೆಯನ್ನು ರಾಜ ಪುರ ಹಿತರು ಸಿದ್ದಮಾಡುತ್ತಿದ್ದಾರೆ.
ಕೆಲವು ಸೇವಕರು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಹೋಗುವ ಪತಂಗ ಕಾರ್ಯಕ್ರಮವೂ ಇದೆ!!
ಅಲ್ಲಿಯವರೆಗೆ ಅಷ್ಟೂ ನ್ಯೂಸ್ ಚಾನಲ್‌ನಲ್ಲಿ ಸುದ್ದಿಗಳ ಭರಪೂರ ವೈಕುಂಠ ಸಮಾರಾಧನೆ
**
ಕೇಂದ್ರದ ದೈವಾಧಿನ ಕೃಪೆಯ ಆಸ್ಪತ್ರೆಯಲ್ಲಿರುವ ರೋಗಿಯೂ ಅಕಾಲಿಕವಾಗಿ ಅಸು ನೀಗಿದಲ್ಲಿ, ಮೇಲೆ ಸೂಚಿಸಿದ ಎಲ್ಲ ಧರ್ಮೋದಕ, ಮಾಸಿಕ, ವರ್ಷಾಂತ ಉತ್ತರ ಕ್ರಿಯಾದಿಗಳು ಅವಧಿಗೆ ಮುನ್ನ ನೆಡೆಯುವ ಸಾಧ್ಯತೆಗಳೂ ಇದ್ದು, ಸದ್ಗತಿಗೆ ಎಲ್ಲರ ಸಹಕಾರ ಮುಂಚಿತವಾಗಿಯೇ ಅನಿವಾರ್ಯವಾಗಬಹುದು!!
-ಅರವಿಂದ ಸಿಗದಾಳ್, ಮೇಲುಕೊಪ್ಪ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment