ನವರಂಗಪುರ (ಒಡಿಶಾ): ನಬರಂಗಪುರ ಜಿಲ್ಲೆಯ ಉಮರ್‌ಕೋಟೆ ಬ್ಲಾಕ್‌ನ ತೋಹ್ರಾ ಗ್ರಾಮದಲ್ಲಿ ಮೂವರು ಹುಡುಗಿಯರ ಶವ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ಬಾಲಕಿಯರನ್ನು ಹೇಮಲತಾ ಗೌಡ (21), ಕೌಶಲ್ಯ ಮಾಝಿ (17) ಮತ್ತು ಫುಲಮತಿ ಮಾಝಿ (16) ಎಂದು ಗುರುತಿಸಲಾಗಿದೆ.
ಈ ಮೂವರೂ ತೋಹರಾ ಗ್ರಾಮದ ನಿವಾಸಿಗಳು. ವರದಿ ಪ್ರಕಾರ, ಶನಿವಾರ ಮೂವರೂ ಹುಡುಗಿಯರು ಸಂಜೆ 4 ಗಂಟೆಯ ಸುಮಾರಿಗೆ ಹತ್ತಿರದ ಕಾಡಿನ ಕಡೆಗೆ ಒಟ್ಟಿಗೆ ಹೋಗುವುದನ್ನು ಗ್ರಾಮಸ್ಥರು ನೋಡಿದ್ದು, ರಾತ್ರಿ 9.30ರ ನಂತರವೂ ಬಾಲಕಿಯರು ವಾಪಸಾಗದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ.
ಸಮೀಪದ ಕಾಡಿನಲ್ಲಿ ಹುಡುಕಾಟ ನಡೆಸಿದಾಗ, ಮೂವರು ಬಾಲಕಿಯರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಾಡಿನಲ್ಲಿ ಮರದಲ್ಲಿ ಪತ್ತೆಯಾಗಿದೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದರೋ, ಇಲ್ಲ ಕೊಲೆ ಮಾಡಿ ನೇತು ಹಾಕಲಾಗಿದೆಯೂ ಗೊತ್ತಿಲ್ಲ.
ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment