ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಂಪ್‌ವೆಲ್‌ ರಾಜಕಾಲುವೆ ಅಭಿವೃದ್ಧಿಗೆ ಶಾಸಕ ಕಾಮತ್‌ ಚಾಲನೆ

ಪಂಪ್‌ವೆಲ್‌ ರಾಜಕಾಲುವೆ ಅಭಿವೃದ್ಧಿಗೆ ಶಾಸಕ ಕಾಮತ್‌ ಚಾಲನೆ


ಮಂಗಳೂರು: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪಂಪ್ವೆಲ್ ನಿಂದ ಕಂಕನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರೆಗಿನ ರಾಜಕಾಲುವೆಯನ್ನು 1.75 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು. 


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಂಪ್ವೆಲ್ ನಿಂದ ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನದ ವರೆಗಿನ ರಾಜಕಾಲುವೆಯ ಆಯ್ದ ಭಾಗಗಳನ್ನು ಅಭಿವೃದ್ಧಿಪಡಿಸಲು 1.75 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಮಳೆಗಾಲದ‌ ಸಂದರ್ಭದಲ್ಲಿ ರಾಜಕಾಲುವೆಯ ಕೆಲವೊಂದು ಕಡೆಗಳಲ್ಲಿ ಮಳೆನೀರು ಉಕ್ಕಿ ಸಾರ್ವಜನಿಕರ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅವಶ್ಯಕತೆಯಿರುವ ಕಡೆಗಳಲ್ಲಿ ತಡೆಗೋಡೆ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು. 


ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ‌ ಸಂದೀಪ್ ಗರೋಡಿ, ಪಾಲಿಕೆ ಸದಸ್ಯರಾದ ಭರತ್ ಸೂಟರ್ ಪೇಟೆ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ಕಿರಣ್ ರೈ ಬಜಾಲ್, ಪ್ರಭಾ ಮಾಲಿನಿ, ಭರತ್ ರಾಜ್ ಶೆಟ್ಟಿ, ರತ್ನಾಕರ್, ಜೇಮ್ಸ್ ಡಿಸೋಜಾ, ಸುಕೇಶ್ ಅಳಪೆ, ಪ್ರಕಾಶ್ ಗರೋಡಿ, ಪ್ರಶಾಂತ್ ಎಂ.ಎನ್, ರೇಖಾ ಶೆಟ್ಟಿ, ಪೂಜಾ ರಾಜ್, ಅಜಿತ್ ಡಿ.ಸಿಲ್ವ, ಶೇಖರ್ ಅಮೀನ್, ಶಿವಪ್ಪ ಅಮೀನ್, ಆಲ್ವಿನ್, ಮನೋಜ್,‌ ಪದ್ಮನಾಭ ನಾಗುರಿ,ಅಶೋಕ್ ಅಂಚನ್, ರೂಪೇಶ್ ಪಂಪ್ವೆಲ್, ವಿಜಯಶ್ರೀ ಗಟ್ಟಿ, ದಯಾ ಉಜ್ಜೋಡಿ, ಸಂದೀಪ್ ನಾಗುರಿ, ಸುರೇಶ್ ಉಜ್ಜೋಡಿ, ಜಗದೀಶ್ ಪಂಪ್ವೆಲ್ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم