ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೇಂದ್ರ ಮೈದಾನದ ಬಳಿ 5.75 ಕೋಟಿ ವೆಚ್ಚದ ಜಲ ಸಂಗ್ರಹಾಗಾರ ನಿರ್ಮಾಣಕ್ಕೆ ಶಾಸಕ ಕಾಮತ್ ಭೂಮಿಪೂಜೆ

ಕೇಂದ್ರ ಮೈದಾನದ ಬಳಿ 5.75 ಕೋಟಿ ವೆಚ್ಚದ ಜಲ ಸಂಗ್ರಹಾಗಾರ ನಿರ್ಮಾಣಕ್ಕೆ ಶಾಸಕ ಕಾಮತ್ ಭೂಮಿಪೂಜೆ

ಜಲಸಿರಿ ಯೋಜನೆಯಡಿ ಮನಪಾ ವ್ಯಾಪ್ತಿಯ ಪ್ರತಿ ಮನೆಗೂ ನೀರು ಒದಗಿಸಲು ನಿರ್ಮಾಣ



ಮಂಗಳೂರು: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ನೀರು ಒದಗಿಸುವ ಜಲಸಿರಿ ಯೋಜನೆಯ ಭಾಗವಾಗಿ ಕೇಂದ್ರ ಮೈದಾನದ ಬಳಿ 5.75 ಕೋಟಿ ವೆಚ್ಚದ ಜಲಸಂಗ್ರಹಾಗಾರ ನಿರ್ಮಾಣಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.


ಈ ವೇಳೆ ಮಾತನಾಡಿದ ಶಾಸಕ ಕಾಮತ್, ಮಂಗಳೂರು ಮಹಾನಗರ ಪಾಲಿಕೆಯ ಕೋರ್ಟ್ ವಾರ್ಡ್, ಪೋರ್ಟ್ ವಾರ್ಡ್, ಕಂಟೋನ್ಮೆಂಟ್ ವಾರ್ಡ್ ಹಾಗೂ ಮಿಲಾಗ್ರೀಸ್ ವಾರ್ಡಿನ ಮನೆಗಳಿಗೆ ನೀರು ಸರಬರಾಜು ಮಾಡಲು 25 ಲಕ್ಷ ಸಂಗ್ರಹಣಾ ಸಾಮರ್ಥ್ಯದ ಜಲಸಂಗ್ರಹಾಗಾರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 5.75 ಕೋಟಿ ವೆಚ್ಚದಲ್ಲಿ ಜಲಸಂಗ್ರಹಾಗಾರ ನಿರ್ಮಿಸಲಾಗುತ್ತಿದ್ದು ಈ ಭಾಗದ ಎಲ್ಲಾ ಮನೆಗಳಿಗೂ ಇಲ್ಲಿಂದ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಕಾರ್ಪೋರೇಟರ್ ಕಿಶೋರ್ ಕೊಟ್ಟಾರಿ, ಪ್ರಮುಖರಾದ ಅನಿಲ್, ವಸಂತ್ ಜೆ ಪೂಜಾರಿ, ನಿತಿನ್ ಕಾಮತ್, ರಾಜೇಂದ್ರ, ಅಮರ್ ಪಾಂಡೇಶ್ವರ, ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




hit counter

0 تعليقات

إرسال تعليق

Post a Comment (0)

أحدث أقدم