ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾವಕ್ಕೆ ತಕ್ಕ ರಾಗ ಸಂಯೋಜನೆ ಮುಖ್ಯ: ಎಂ ಎಸ್ ಗಿರಿಧರ್

ಭಾವಕ್ಕೆ ತಕ್ಕ ರಾಗ ಸಂಯೋಜನೆ ಮುಖ್ಯ: ಎಂ ಎಸ್ ಗಿರಿಧರ್

ಉಳ್ಳಾಲ ಕಸಾಪದಿಂದ ಇರಾದಲ್ಲಿ ಭಾವಗೀತೆ ಕಮ್ಮಟ



ಮುಡಿಪು: ಗೀತೆಯ ಸಾಹಿತ್ಯ ಮತ್ತು ಭಾವನೆ ಅರಳುವಂತೆ ರಾಗ ಸಂಯೋಜನೆ ಹಾಗೂ ಹಾಡುಗಾರಿಕೆಯಿರಬೇಕು. ಆಗ ಮಾತ್ರ ಸಹೃದಯಾನಂದ ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ಪ್ರಸಿದ್ಧ ಸಂಗೀತ ನಿರ್ದೇಶಕ ಎಂ.ಎಸ್ ಗಿರಿಧರ್ ಹೇಳಿದರು.


ಅವರು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ ಕೊಳಲು ಸಂಗೀತ ವಿದ್ಯಾಲಯ (ರಿ.) ಇರಾ ಇವರ ಸಹಯೋಗದೊಂದಿಗೆ ಇರಾ ದಕ ಜಿ.ಪ.ಹಿ.ಪ್ರಾ ಶಾಲೆ ಇಲ್ಲಿ ನಡೆದ ಭಾವಗೀತೆ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ  ಕಸಾಪ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಮಂಗಳೂರು ವಿವಿಯ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಮಾತನಾಡಿ ಕನ್ನಡದ ಕಾರ್ಯಕ್ರಮಗಳು ಗ್ರಾಮಾಂತರ ಪ್ರದೇಶಗಳಿಗೆ ಕೊಂಡೊಯ್ಯುವ ಕಾರ್ಯವನ್ನು ಸಾಹಿತ್ಯ ಪರಿಷತ್ತು ಕೈಗೆತ್ತಿಕೊಂಡಿದೆ. ಉಪನ್ಯಾಸ, ಕಾರ್ಯಾಗಾರ, ಕಮ್ಮಟ, ಕನ್ನಡ ಸ್ಪರ್ಧೆಗಳ ಮೂಲಕ ಕನ್ನಡ ಸಂಸ್ಕೃತಿ ಪ್ರಸರಣದ ಉದ್ದೇಶವನ್ನು ಪರಿಷತ್ತು ಸಾಕಾರಗೊಳಿಸಲು ಪ್ರಯತ್ನಿಸುತ್ತದೆ ಎಂದರು.


ಸಾಹಿತಿ ಮಂಜುನಾಥ ಶೆಟ್ಟಿ ಇರಾ, ಕಸಾಪ ಉಳ್ಳಾಲ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಶಾಲಾ ಮುಖ್ಯ ಶಿಕ್ಷಕಿ ಶಶಿ ಬಿ, ಕೊಳಲು ವಿದ್ಯಾಸಂಸ್ಥೆಯ ನಿರ್ದೇಶಕಿ ಹಾಗೂ ಕಸಾಪ ಉಳ್ಳಾಲ ಘಟಕದ ಇರಾ ಗ್ರಾಮ ಸಂಚಾಲಕಿ ಮಂಜುಳಾ‌. ಜಿ. ರಾವ್, ಇತರೆ ಗ್ರಾಮ ಸಂಚಾಲಕರುಗಳಾದ  ವಿಜಯಲಕ್ಷ್ಮೀ ಕಟೀಲು, ರೇಷ್ಮಾ ನಿರ್ಮಲ ಭಟ್ ಭಾಗವಹಿಸಿದ್ದರು.  


ಸಂಚಾಲಕ ಹೇಮಚಂದ್ರ ಕೈರಂಗಳ ನಿರೂಪಿಸಿದರು. ಕಮ್ಮಟದಲ್ಲಿ ಉಳ್ಳಾಲ ತಾಲೂಕಿನ ಆಯ್ದ 40 ಯುವಗಾಯಕಿಯರು, ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಆಸಕ್ತ ಸಾರ್ವಜನಿಕರು ಭಾಗವಹಿಸಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم